ಶನಿವಾರ, ಸೆಪ್ಟೆಂಬರ್ 25, 2021
26 °C

ಕಿಸ್ ಇಮೋಜಿ ಜತೆ ‘ಮಾರ್ನಿಂಗ್ ವಿವ್’ ಪೋಸ್ಟ್ ಮಾಡಿದ ದೀಪಿಕಾ ಪಡುಕೋಣೆ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಪತಿ ರಣವೀರ್ ಸಿಂಗ್ ಫೋಟೊ ಜತೆ ಪ್ರಕಟಿಸಿದ ಸಂದೇಶ ಅಭಿಮಾನಿಗಳ ಗಮನ ಸೆಳೆದಿದೆ.

ರಣವೀರ್ ಸಿಂಗ್ ನಿದ್ರಿಸುತ್ತಿರುವ, ಅವರ ಮುಖ ಅರ್ಧ ಮುಚ್ಚಿರುವ ಫೋಟೊ ಪ್ರಕಟಿಸಿರುವ ದೀಪಿಕಾ, ಕಿಸ್ ಇಮೋಜಿ ಜತೆ ‘ಮೈ ಮಾರ್ನಿಂಗ್ ವಿವ್ (ನನ್ನ ಬೆಳಗ್ಗಿನ ನೋಟ)’ ಎಂಬ ಸಂದೇಶ ಪ್ರಕಟಿಸಿದ್ದಾರೆ.

ಈ ಹಿಂದೆಯೂ ರಣವೀರ್‌ ಅವರ ಕೆಲವು ಅಪರೂಪದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು ದೀಪಿಕಾ.

ಓದಿ: 

ಬ್ಯಾಡ್ಮಿಂಟನ್ ತಾರೆ, ಟೋಕಿಯೊ ಒಲಿಂಪಿಕ್ಸ್‌ನ ಪದಕ ವಿಜೇತೆ ಪಿ.ವಿ ಸಿಂಧು ಅವರಿಗೆ ಶನಿವಾರ ರಾತ್ರಿ ಔಟಣಕೂಟ ನೀಡಿದ್ದ ಫೋಟೊವನ್ನು ಭಾನುವಾರ ರಣವೀರ್ ಸಿಂಗ್ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು.

ದೀಪಿಕಾ ಹಾಗೂ ರಣವೀರ್ ಅಭಿನಯದ ಕಪಿಲ್ ದೇವ್ ಜೀವನ ಕಥೆ ಹೊಂದಿರುವ ‘83‘ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು