ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೆಹಲಿ ಫೈಲ್ಸ್‌’ ತಮಿಳುನಾಡಿನ ಬಗ್ಗೆಯೂ ಹೇಳಲಿದೆ: ವಿವೇಕ್‌ ಅಗ್ನಿಹೋತ್ರಿ

Last Updated 17 ಏಪ್ರಿಲ್ 2022, 10:12 IST
ಅಕ್ಷರ ಗಾತ್ರ

ಚೆನ್ನೈ: ‘ಮುಂಬರುವ ‘ದೆಹಲಿ ಫೈಲ್ಸ್‌’ ಚಿತ್ರವು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ತಮಿಳುನಾಡಿನ ಬಗ್ಗೆಯೂ ವಿವರಿಸಲಿದೆ’ ಎಂದು ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಹೇಳಿದ್ದಾರೆ.

ಇನ್ನಷ್ಟೇ ತಯಾರಾಗಬೇಕಾಗಿರುವ ‘ದೆಹಲಿ ಫೈಲ್ಸ್‌ ’ ಚಿತ್ರದ ಕುರಿತು ಚೆನ್ನೈನಲ್ಲಿ ಮಾತನಾಡಿರುವ ವಿವೇಕ್‌, ‘ದೆಹಲಿ ಫೈಲ್ಸ್‌’ ಚಿತ್ರ ತಮಿಳುನಾಡಿನ ಬಗ್ಗೆ ಸಾಕಷ್ಟು ಸತ್ಯವನ್ನು ಹೇಳಲಿದೆ. ದೆಹಲಿಯಲ್ಲಿ ಕುಳಿತು ದೇಶವನ್ನು ಯಾರೆಲ್ಲ ಆಳಿದರು, ಮೊಘಲರು, ಬ್ರಿಟಿಷರಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗೆ ಎಲ್ಲರೂ ಎಲ್ಲವನ್ನೂ ಹೇಗೆ ನಾಶಪಡಿಸಿದರು’ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಆದರೆ, ತಮಿಳುನಾಡಿನ ಬಗ್ಗೆ ಚಿತ್ರದಲ್ಲಿ ಇರಬಹುದಾದ ವಿವರಣೆಗಳ ಕುರಿತು ಅವರು ಹೆಚ್ಚೇನೂ ಹೇಳಲಿಲ್ಲ.

‘ಇತಿಹಾಸವು ದಾಖಲೆ ಮತ್ತು ಸತ್ಯವನ್ನು ಆಧರಿಸಿರಬೇಕು. ನಿರೂಪಣೆಯ ಆಧಾರ ಇರಬಾರದು. ಭಾರತದಲ್ಲಿ, ಬಹಳಷ್ಟು ಜನರು ನಿರೂಪಣೆ, ರಾಜಕೀಯದ ಆಧಾರದ ಮೇಲೆ ಇತಿಹಾಸವನ್ನು ಬರೆಯುತ್ತಾರೆ. ಆದರೆ, ಅವರ ರಾಜಕೀಯ ಕಾರ್ಯಸೂಚಿಯು ಪಾಶ್ಚಾತ್ಯ ಜಾತ್ಯತೀತ ಕಾರ್ಯಸೂಚಿಯನ್ನು ಆಧರಿಸಿದೆ ಎಂಬುದೇ ಸಮಸ್ಯೆ. ಈ ಕಾರ್ಯಸೂಚಿಯಲ್ಲಿ ಹಿಂದೂ ನಾಗರಿಕತೆಯನ್ನು ಯಾವಾಗಲೂ ನಿರ್ಲಕ್ಷಿಸಲಾಗುತ್ತದೆ. ನಾವು ದುರ್ಬಲರು, ನಾವು ಕಲಿತದ್ದೆಲ್ಲವೂ ಪಾಶ್ಚಾತ್ಯರಿಂದ ಅಥವಾ ಆಕ್ರಮಣಕಾರಿಗಳಿಂದ ಎಂದು ನಂಬುವಂತೆ ಮಾಡಲಾಗುತ್ತದೆ‘ ಎಂದು ಅವರು ಪ್ರತಿಪಾದಿಸಿದರು. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕಾಶ್ಮೀರಿ ಪಂಡಿತರ ಕುರಿತ ವಿವೇಕ್‌ ಅಗ್ನಿಹೋತ್ರಿ ಅವರ ‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಚಿತ್ರದ ಕುರಿತ ವಾದ ವಿವಾದ ಇನ್ನೂ ಚಾಲ್ತಿಯಲ್ಲಿರುವಾಗಲೇ ವಿವೇಕ್‌ ‘ದೆಹಲಿ ಫೈಲ್ಸ್‌’ ಚಿತ್ರ ಮಾಡುವುದಾಗಿಯೂ, ಅದರ ಮೂಲಕ ಹಲವು ಸತ್ಯಸಂಗತಿಗಳನ್ನು ಬೆಳಕಿಗೆ ತರುವುದಾಗಿಯೂ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT