ಕುತೂಹಲದ ‘ದೇವಿ 2’

ಮಂಗಳವಾರ, ಜೂನ್ 18, 2019
23 °C

ಕುತೂಹಲದ ‘ದೇವಿ 2’

Published:
Updated:
Prajavani

ತಮನ್ನಾ ಭಾಟಿಯಾ, ಪ್ರಭುದೇವ ಅಭಿನಯದ ಕಾಮಿಡಿ ಹಾರರ್ ಸಿನಿಮಾ ‘ದೇವಿ’ ಕಾಲಿವುಡ್‌ನಲ್ಲಿ ಯಶಸ್ಸು ಗಳಿಸಿತ್ತು. ರೂಪದರ್ಶಿ ರೂಬಿ ಪಾತ್ರ ಹಾಗೂ ಸಾಂಪ್ರದಾಯಿಕ ಚೆಲುವೆ ಹೀಗೆ ಎರಡಲ್ಲೂ ತಮನ್ನಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಾಕ್ಸಾಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಿತ್ತು. ಇದೀಗ ‘ದೇವಿ 2’ ಸಿನಿಮಾ ಬರಲಿದ್ದು, ಈಚೆಗಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 

ಏಪ್ರಿಲ್‌ನಲ್ಲೇ ತೆರೆಗೆ ಬರಬೇಕಿದ್ದ ‘ದೇವಿ 2’ ಸಿನಿಮಾ ಟ್ರೇಲರ್ ಆನ್‌ಲೈನ್‌ನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಟ್ರೇಲರ್‌ಗೂ ಮುನ್ನ ‘ಲವ್’ ಮಿ ಅನ್ನುವ ಹಾಡು ಕೂಡಾ ಬಿಡುಗಡೆ ಕಂಡಿತ್ತು. ‘ವಿಕ್ರಮ್ ವೇದ’ ಸಿನಿಮಾಕ್ಕೆ ಹಾಡು ಬರೆದು ಮತ್ತು ಸಂಗೀತ ನಿರ್ದೇಶಿಸಿದ್ದ ಮಾಧನ್ ಕರ್ಕೆ, ಈ ಹಾಡು ಬರೆದಿದ್ದಾರೆ. 

‘ದೇವಿ 2’ ಮೂಲಕಥೆಯನ್ನೇ ಹೊಂದಿದ್ದು, ಈ ಬಾರಿ ತಮನ್ನಾ ಬದಲಿಗೆ ಪ್ರಭುದೇವ ದೆವ್ವದ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.  ಈ ಸಿನಿಮಾದಲ್ಲಿ ಪ್ರಭುದೇವ ಎರಡು ದೆವ್ವಗಳನ್ನು ಆವಾಹಿಸಿಕೊಂಡಿದ್ದಾರೆ. ಹಳ್ಳಿಯ ಸಂಪ್ರದಾಯಸ್ಥೆ ಪಾತ್ರದಲ್ಲಿ ಗ್ಲಾಮರ್‌ರಹಿತ ಪಾತ್ರದಲ್ಲಿ ತಮನ್ನಾ ನಟಿಸಿದ್ದಾರೆ. ಟ್ರೇಲರ್‌ನ ವಿಚಿತ್ರ ಸಂಭಾಷಣೆ, ಹಾಸ್ಯ ದೃಶ್ಯಾವಳಿಗಳು ಸಿನಿಮಾದ ಹೂರಣವನ್ನು ತೆರೆದಿಡುವಂತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !