ರೀಲ್ಸ್ ಲೋಕದಲ್ಲಿ ಸದ್ದು ಮಾಡಿ ಪ್ರಸ್ತುತ ‘ಬೃಂದಾವಿಹಾರಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ ದೇವಿಕಾ ಭಟ್. ಮೊದಲ ಸಿನಿಮಾದಲ್ಲೇ ಗಣೇಶ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಪಡೆದ ದೇವಿಕಾ ತಮ್ಮ ಪಯಣದ ಬಗ್ಗೆ ‘ಸಿನಿಮಾ ರಂಜನೆ’ ಜೊತೆ ಮಾತಿಗಿಳಿದಾಗ...

ನಿಮ್ಮ ಹಿನ್ನೆಲೆ...

ಉತ್ತರ: ನಾನು ಶೃಂಗೇರಿ ಬಳಿ ಇರುವ ಕೊಪ್ಪದವಳು. ಬೆಳೆದಿದ್ದು ಬೆಂಗಳೂರಿನಲ್ಲಿ. ಶಿಕ್ಷಣವೂ ರಾಜಧಾನಿಯಲ್ಲೇ. ಇತ್ತೀಚೆಗೆ ಎಂಬಿಎ ಪೂರ್ಣಗೊಳಿಸಿದೆ. ಶಿಕ್ಷಣದ ಜೊತೆಗೆ ಸಿನಿಮಾದಲ್ಲಿ ನಟಿಸುವ ಕನಸು ಇಟ್ಟುಕೊಂಡಿದ್ದೆ. ಅಮ್ಮನ ಆಸೆಯೂ ಇದೇ ಆಗಿತ್ತು. ಕುಟುಂಬದ ಇಚ್ಛೆಯಂತೆ ಮೊದಲು ಶಿಕ್ಷಣ ಪೂರ್ಣಗೊಳಿಸಿದೆ. ಆಸೆ ಆದ್ಯತೆಯಾಯಿತು. ಈ ಅವಧಿಯಲ್ಲಿ ಕ್ಯಾಮೆರಾ ಮುಂದೆ ನಿರ್ಭೀತಿಯಿಂದ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ, ಫೋಟೋಶೂಟ್ಗಳಲ್ಲಿ ಕಾಣಿಸಿಕೊಂಡೆ. ಇವುಗಳು ಹೆಚ್ಚಿನ ಜನರಿಗೆ ತಲುಪಲಿವೆ ಎನ್ನುವುದನ್ನು ಊಹಿಸಿಯೂ ಇರಲಿಲ್ಲ. ತನ್ನ ರೀಲ್ಸ್ಗಳನ್ನು ಹೆಚ್ಚಿನ ಜನರು ಇಷ್ಟಪಟ್ಟಾಗ ಅವುಗಳ ಸಂಖ್ಯೆ ಹೆಚ್ಚಿಸಿದೆ. ಇವುಗಳ ಮೂಲಕವೇ ನನ್ನ ಬಣ್ಣದ ಪಯಣಕ್ಕೂ ದಾರಿ ತೆರೆಯಿತು. ನಿರ್ದೇಶಕರು, ಚಿತ್ರತಂಡಗಳು ನನ್ನನ್ನು ಗುರುತಿಸಿದ್ದೂ ಇವುಗಳಿಂದಲೇ.

ಬಳಿಕ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿದೆ. ಧಾರಾವಾಹಿ, ರೀಲ್ಸ್ಗಳಲ್ಲಿ ನನ್ನನ್ನು ನೋಡಿ ಕನ್ನಡ, ತೆಲುಗು, ತಮಿಳಿನಿಂದ ಹಲವು ಆಫರ್ಗಳು ಬಂದವು. ಧಾರಾವಾಹಿಯ ಪಾತ್ರ ನೆಗೆಟಿವ್ ಶೇಡ್ನತ್ತ ತಿರುಗಿದಾಗ, ಅವಕಾಶಗಳು ಹೆಚ್ಚಾದಾಗ ಧಾರಾವಾಹಿ ನಟನೆ ನಿಲ್ಲಿಸಿದೆ. ಬಳಿಕ ಓದು ಪೂರ್ಣಗೊಳಿಸುವತ್ತ ಚಿತ್ತಹರಿಸಿದೆ. ಹೀಗಾಗಿ ಎಂಬಿಎ ಪೂರ್ಣಗೊಳಿಸಿದ ಬೆನ್ನಲ್ಲೇ ‘ಬೃಂದಾವಿಹಾರಿ’ ಕೈಗೆತ್ತಿಕೊಂಡೆ.

ಮೊದಲ ಸಿನಿಮಾದಲ್ಲೇ ಸ್ಟಾರ್ ಜೊತೆ ನಟನೆ...

ಉತ್ತರ: ಇದು ಕನಸು ನನಸಾದ ಕ್ಷಣ. ರೀಲ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡ ತೆರೆಯಲ್ಲಿ ನಾನು ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲವಿತ್ತು. ಈಗಲೂ ಈ ಕುತೂಹಲವಿದೆ. ನನ್ನನ್ನಿನ್ನೂ ಬೃಹತ್ ಪರದೆಯಲ್ಲಿ ನೋಡಿಲ್ಲ. ಮೊದಲ ಸಿನಿಮಾದಲ್ಲೇ ಗಣೇಶ್ ಅವರ ಜೊತೆ ನಟಿಸುತ್ತೇನೆ ಎನ್ನುವುದನ್ನು ನಿರೀಕ್ಷಿಸಿಯೂ ಇರಲಿಲ್ಲ. ಮೊದಲ ಬಾರಿ ಅವರನ್ನು ನೋಡಿದಾಗ, ಅವರೊಂದಿಗೆ ನಟಿಸಿದಾಗ ಆದ ಖುಷಿಗೆ ಪಾರವೇ ಇಲ್ಲ. ಗಣೇಶ್ ಅವರ ‘ಮುಂಗಾರು ಮಳೆ’, ‘ಚೆಲುವಿನ ಚಿತ್ತಾರ’, ‘ಗಾಳಿಪಟ’ ನನ್ನ ನೆಚ್ಚಿನ ಚಿತ್ರಗಳು. ಅವುಗಳಲ್ಲೂ ‘ಗಾಳಿಪಟ’ಕ್ಕೆ ಒಂದು ಅಂಕ ಹೆಚ್ಚೇ ಎನ್ನಬಹುದು. ಒಂದು ರೀತಿಯಲ್ಲಿ ಕಾಲೇಜು ದಿನಗಳ ಕ್ರಶ್ ಅವರು. ಅವರ ಸಿನಿಮಾಗಳಲ್ಲಿನ ಹಾಡುಗಳ ಅಭಿಮಾನಿ ನಾನು.

ಯಾರು ಈ ರಾಧ?

ಉತ್ತರ: ನನ್ನ ಪಾತ್ರವಾದ ‘ರಾಧ’ ಓರ್ವ ಮುಗ್ಧ ಹುಡುಗಿ. ‘ರಾಧೆ’ ಎನ್ನುವ ಹೆಸರಿಗೆ ತಕ್ಕಂತ ಹುಡುಗಿ. ನಾನು ಕಥಕ್ ನೃತ್ಯಗಾರ್ತಿ. ಇದು ಸಿನಿಮಾದಲ್ಲಿನ ನನ್ನ ಪಾತ್ರಕ್ಕೂ ಸಹಕಾರಿಯಾಯಿತು. ಸಿನಿಮಾದೊಳಗೆ ಭರತನಾಟ್ಯವಿದೆ.

ನಿಮ್ಮ ಕನಸುಗಳು...

ಉತ್ತರ: ಕನ್ನಡದಲ್ಲೇ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು, ಮನೆಮನೆಯ ಮಾತಾಗಬೇಕು ಎನ್ನುವ ಕನಸು ನನ್ನದು. ಪುಟ್ಟ ಮಗುವಿಗಿರುವ ಖುಷಿಯಂತೆ ಮೊದಲ ಸಿನಿಮಾ ಮಾಡಿದ ಖುಷಿಯಲ್ಲೇ ಇನ್ನೂ ಇದ್ದೇನೆ. ಹೊಸ ಮುಖಗಳ ನಡುವೆ ಆರಂಭವಾದ ನನ್ನ ಮೊದಲ ಸಿನಿಮಾದ ಪಯಣ ನನಗೊಂದು ಕುಟುಂಬದಂತಾಗಿದೆ. ಮೈಸೂರಿನಲ್ಲಿ ಎರಡು ತಿಂಗಳ ಶೂಟಿಂಗ್ ಅನುಭವ ಹೊಸ ಪಾಠಗಳನ್ನು ಕಲಿಸಿದೆ. ಸದ್ಯ ಹೊಸಕಥೆಗಳನ್ನು ಕೇಳುತ್ತಿದ್ದೇನೆ. ಕೆಲವು ಪ್ರಾಜೆಕ್ಟ್ಗಳು ಮಾತುಕತೆ ಹಂತದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.