ಕಲಘಟಗಿ: ನಟ ಡಾಲಿ ಧನಂಜಯ್ ಅವರ ಗಂಡು ಮಗುವಿಗೆ ಇಲ್ಲಿನ ಪ್ರಸಿದ್ಧ ಬಣ್ಣದ ತೊಟ್ಟಿಲು ಸಿದ್ದವಾಗುತ್ತಿದೆ. ಪಟ್ಟಣದ ತೊಟ್ಟಿಲು ತಯಾರಕರಾದ ಶ್ರೀಧರ್ ಸಾವುಕಾರ ಅವರಿಗೆ ಧನಂಜಯ್ ಅವರ ಆಪ್ತರಾದ ನಾರಾಯಣ್ ಕಲಾಲ್ ಅವರು ತೊಟ್ಟಿಲು ತಯಾರಿಸಲು ಹೇಳಿದ್ದಾರೆ. ಜೂನ್ನಲ್ಲಿ ತೊಟ್ಟಿಲು ಲಭ್ಯವಾಗಲಿದೆ.

ತೊಟ್ಟಿಲು ವಿಶೇಷತೆ: ಸಂಪೂರ್ಣ ಸಾಗವಾನಿ ಕಟ್ಟಿಗೆ ಬಳಸಿ ತೊಟ್ಟಿಲು ತಯಾರಿಸಲಾಗುತ್ತಿದೆ. ರಾಸಾಯನಿಕ ಬಣ್ಣ ಬಳಸದೆ ನೈಸರ್ಗಿಕ ಬಣ್ಣ ಲೇಪಿಸಲಾಗುತ್ತಿದೆ. ಇದರಿಂದ ಉತ್ತಮ ಬಾಳಿಕೆ ಬರುತ್ತದೆ. ಅಂದವೂ ಹೆಚ್ಚುತ್ತದೆ’ ಎಂದು ಶ್ರೀಧರ್ ಹೇಳಿದರು.

‘ದೇಶಿ ಸಂಸ್ಕೃತಿ ಸಾರುವ ಹಾಗೂ ಪಾರಂಪರಿಕ ಹೆಮ್ಮೆಯ ಪ್ರತೀಕವಾದ ಕೃಷ್ಣಾವತಾರ ಕಥೆಗಳ ಚಿತ್ರ, ರಾಮಾಯಣ, ಮಹಾಭಾರತದ ದೃಶ್ಯಗಳನ್ನು ಕೆತ್ತಲಾಗುವುದು. ಒಂದು ತೊಟ್ಟಿಲು ತಯಾರಿಸಲು ಒಂದು ತಿಂಗಳು ಬೇಕು. ನಮ್ಮ ಕುಟುಂಬ ಮೂರು ತಲೆಮಾರಿನಿಂದ ತೊಟ್ಟಿಲು ತಯಾರಿಸುತ್ತಿದ್ದು, ಚಿತ್ರರಂಗದ ಖ್ಯಾತನಾಮರಿಗೆ, ರಾಜಕೀಯ ಗಣ್ಯರಿಗೆ ತೊಟ್ಟಿಲು ತಯಾರಿಸಿ ಕೊಟ್ಟಿದ್ದೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-24-1053638067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.