ಜೀ5 ಜೊತೆಗೂಡಿ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ನಟ ಧನಂಜಯ ನಿರ್ಮಾಣ ಮಾಡಿರುವ ‘ಜೆರಾಕ್ಸ್’ ವೆಬ್ಸರಣಿಯಲ್ಲಿ ನಾಗಭೂಷಣ್ ನಾಯಕರಾಗಿ ನಟಿಸುತ್ತಿದ್ದು, ಪಾಯಲ್ ಚೆಂಗಪ್ಪ ಜೋಡಿಯಾಗಿದ್ದಾರೆ.

‘ಹನಿಮೂನ್’ ವೆಬ್ಸರಣಿ ಹಾಗೂ ‘ಇಕ್ಕಟ್’, ‘ಟಗರು ಪಲ್ಯ’, ‘ವಿದ್ಯಾಪತಿ’ ಸಿನಿಮಾಗಳ ಮೂಲಕ ಕನ್ನಡದ ಜನತೆಗೆ ಹತ್ತಿರವಾಗಿರುವ ನಾಗಭೂಷಣ್, ಮತ್ತೊಮ್ಮೆ ವೆಬ್ಸರಣಿ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಮಾತಿಗಿಳಿದ ನಾಗಭೂಷಣ್, ‘ನಾನು ನಟಿಸಿದ್ದ ‘ಹನಿಮೂನ್’ ಬಿಡುಗಡೆಯಾದ ಸಂದರ್ಭದಲ್ಲಿ ಒಟಿಟಿಯಲ್ಲಿ ಕನ್ನಡದ ಕಾಂಟೆಂಟ್ಗಳು ವಿರಳವಾಗಿತ್ತು. ಕನ್ನಡದಲ್ಲಿ ವೆಬ್ಸರಣಿಗಳು ಬರಬೇಕು ಎನ್ನುವ ಆಶಯ ಹೊತ್ತು ಕೆಲಸ ಮಾಡಿದ್ದೆವು. ಈ ಮಾದರಿಯ ಕಾಂಟೆಂಟ್ಗಳ ಬಗ್ಗೆ ನನಗೆ ಆಸಕ್ತಿಯೂ ಇತ್ತು. ವೆಬ್ಸರಣಿಯ ಮುಂದಿನ ಹೆಜ್ಜೆಯಾಗಿ ಸಿನಿಮಾಗೆ ಇಳಿದೆ. ಹಾಗೆಂದ ಮಾತ್ರಕ್ಕೆ ವೆಬ್ಸರಣಿಯತ್ತ ಮರಳಬಾರದು ಎಂದೇನಿಲ್ಲವಲ್ಲ. ನಾನೊಬ್ಬ ನಟ. ನನಗೆ ಸಿನಿಮಾ ಅಥವಾ ವೆಬ್ಸರಣಿಯಲ್ಲಿ ಪಾತ್ರವಷ್ಟೇ ಮುಖ್ಯ. ವೆಬ್ಸರಣಿ ವಿಷಯದಲ್ಲಿ ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಯೋಗಗಳಾಗುತ್ತಿವೆ. ಜೀ5 ನಿರಂತರವಾಗಿ ವೆಬ್ ಸರಣಿ ಮಾಡುತ್ತಿದೆ. ಕನ್ನಡದ ಕಾಂಟೆಂಟ್ಗಳಿಗೂ ಒಳ್ಳೆಯ ವೇದಿಕೆ ಸಿಗುತ್ತಿದೆ’ ಎಂದರು.

ಮರಳಿ ಬೇರಿಗೆ

‘ವೆಬ್ಸರಣಿ ಎನ್ನುವುದು ಬರಹಗಾರರ ವೇದಿಕೆ. ಇಲ್ಲಿ ಹಲವು ವಿಷಯಗಳನ್ನು ಹೇಳಲು ಅವಕಾಶವಿದೆ. ‘ಕೆಇಬಿ’ ಯುಟ್ಯೂಬ್ ವಿಡಿಯೊಗಳಿಂದ ನನ್ನ ಈ ಪಯಣ ಆರಂಭವಾಯಿತು. ನನಗೆ ಕೀರ್ತಿ ತಂದುಕೊಟ್ಟಿರುವುದೇ ಒಟಿಟಿ ವೇದಿಕೆ. ‘ಜೆರಾಕ್ಸ್’ ಸರಣಿಯ ಪಯಣ ಮರಳಿ ಬೇರಿಗೆ ಎನ್ನಬಹುದು. ನನಗೆ ಸಿನಿಮಾ, ವೆಬ್ಸರಣಿ ಬೇರೆ ಬೇರೆಯಲ್ಲ. ಎರಡನ್ನೂ ಇಷ್ಟಪಡುತ್ತೇನೆ’ ಎನ್ನುತ್ತಾರೆ ನಾಗಭೂಷಣ್.

‘ಜೆರಾಕ್ಸ್’ ಡ್ರಾಮಾ...

‘ಈ ವೆಬ್ಸರಣಿ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ಜಾನರ್ನಲ್ಲಿದೆ. ಬಹುತೇಕ ಫ್ಯಾಂಟಸಿ ಸಿನಿಮಾಗಳ ಕಥೆಗಳು ದೊಡ್ಡ ನಗರಗಳಲ್ಲಿ ನಡೆಯುವಂತೆ ಚಿತ್ರಿತವಾಗಿರುತ್ತವೆ. ಆದರೆ ‘ಜೆರಾಕ್ಸ್’ ಕಥೆ ನಡೆಯುವುದು ಸಣ್ಣ ಊರಿನಲ್ಲಿ. ಒಂದು ‘ಜೆರಾಕ್ಸ್’ ಯಂತ್ರದಿಂದ ಮನುಷ್ಯರನ್ನೇ ನಕಲು ಮಾಡುವ ಶಕ್ತಿ ನನಗಿರುತ್ತದೆ. ‘ಪ್ರಕಾಶ’ ನನ್ನ ಪಾತ್ರದ ಹೆಸರು. ಈ ಶಕ್ತಿಯಿಂದ ಆ ಊರಿನಲ್ಲಿ ನಡೆಯುವ ಡ್ರಾಮಾ, ಗೊಂದಲಗಳೇ ಸರಣಿಯ ಕಥೆ’ ಎಂದರು ನಾಗಭೂಷಣ್.

‘ವಿದ್ಯಾಪತಿ ಸಿನಿಮಾದಲ್ಲಿ ಹಿಂದಿನೆಲ್ಲಾ ಸಿನಿಮಾಗಳಿಗಿಂತ ಹೆಚ್ಚಿನ ಪ್ರಯತ್ನ ಹಾಕಿದ್ದೆ. ಆದರೆ ನಿರೀಕ್ಷಿತ ಪ್ರತಿಫಲ ಸಿಗಲಿಲ್ಲ. ಮಾಡಿದ ಸಿನಿಮಾಗಳೆಲ್ಲವೂ ಯಶಸ್ವಿಯಾಗಬೇಕು ಎಂದೇನಿಲ್ಲ ಎನ್ನುವ ಪಾಠ ಇದರಿಂದ ಕಲಿತೆ. ಹಿನ್ನೆಡೆಯನ್ನು ಒಪ್ಪಿಕೊಂಡರಷ್ಟೇ ಮುನ್ನಡೆಯಲು ಸಾಧ್ಯ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.

ಪಾಯಲ್ ಜೋಡಿ

‘ಅಮೃತ ಅಂಜನ್’ ಸಿನಿಮಾ ಹಾಗೂ ಹತ್ತಾರು ಯುಟ್ಯೂಬ್ ಕಿರುಚಿತ್ರಗಳ ಮೂಲಕ ಖ್ಯಾತಿ ಪಡೆದಿರುವ ನಟಿ ಪಾಯಲ್ ಚೆಂಗಪ್ಪ ಈ ಸರಣಿಯಲ್ಲಿ ‘ಸೂಜಿ’ಯಾಗಿ ಕಾಣಿಸಿಕೊಂಡಿದ್ದಾರೆ. ‘ಬ್ಲಿಂಕ್’ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿರುವ ಈ ಸರಣಿಯ ಟ್ರೇಲರ್ ಏ.14ರಂದು ಬಿಡುಗಡೆಯಾಗಲಿದೆ. ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ ಈ ಸರಣಿ ಶೀಘ್ರದಲ್ಲೇ ಜೀ5ನಲ್ಲಿ ಸ್ಟ್ರೀಮ್ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.