ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ ‘ಮದರ್ ಪ್ರಾಮಿಸ್’ ಚಿತ್ರದ ʼನೀನೇ ಬೇಕು ಅಮ್ಮʼ ಎಂಬ ಹಾಡಿನ ಕುರಿತು ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡ ಅವರು, ʼಈ ಸಿನಿಮಾದ ಅಮ್ಮನ ಬಗ್ಗೆ ಹಾಡು ನೀನೆ ಬರೆಯಬೇಕು ಪೂರ್ಣ ಹೇಳಿದ್ದರು. ʼಟಗರುಪಲ್ಯʼ ನಂತರ ಹಾಡು ಬರೆಯೋಕೆ ಆಗಿರಲಿಲ್ಲ. ಮನಸ್ಸು ಸೃಜನಾತ್ಮಕ ಬರವಣಿಗೆಯಿಂದ ದೂರಾಗಿ ನಿರ್ಮಾಣ, ವ್ಯವಹಾರಗಳಲ್ಲಿ, ಬದುಕಿನ ಗೋಜಲುಗಳಲ್ಲಿ, ಬೇರೆ ಖುಷಿಗಳಲ್ಲಿ ಕಳೆದು ಹೋಗಿತ್ತು. ಮತ್ತೆ ಬರೆಯೋಕೆ ಆಗುತ್ತಾ.? ಅನ್ನುವ ಆಲೋಚನೆಯಲ್ಲೇ ಆರಂಭಿಸಿದೆ. ಸರಳವಾಗಿ ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ. ತಾಯಿ ಬಗ್ಗೆ ಏನೇ ಬರೆದರೂ, ಎಷ್ಟು ಬರೆದರೂ ಕಡಿಮೆʼ ಎಂದಿದ್ದಾರೆ.

ಮೇ 10ರಂದು ವಿಶ್ವ ತಾಯಂದಿರ ದಿನದಂದು ‘ಮದರ್ ಪ್ರಾಮಿಸ್’ ಚಿತ್ರದ ʼನೀನೇ ಬೇಕು ಅಮ್ಮʼ ಹಾಡು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಡಾಲಿ ಅವರು ಬರೆದ ಈ ಹಾಡಿನ ಸಾಹಿತ್ಯ ಹೀಗಿದೆ...

ಹೇ ಮಮತೆಯ ಬಳ್ಳಿ ಸಿರಿತನವೆಲ್ಲಿ ನೀನು ಇರದೆ..ಹೇ ಮೆರಗಿನ ಬೆಳ್ಳಿ ಬಡತನವಿಲ್ಲಿ ನೀನು ಇರದೆ.. ಯಾವ ಪದವಿಗಳು ಪದಕಗಳೂ ಬೇಕಿಲ್ಲ ನೀನು ಬೇಕು ಅಮ್ಮ ಯಾವ ಹಿರಿಗರಿಮೆ ಅರಸೊತ್ತಿಗೆ ಬೇಕಿಲ್ಲ ನೀನೇ ಬೇಕು ಅಮ್ಮʼ.. ಎಂದು ಹಾಡು ಮುಂದುವರೆಯುವುದು..

ಸದ್ಯ, ಈ ಹಾಡಿನ ಸಾಹಿತ್ಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೂರ್ಣಚಂದ್ರ ಅವರ ನಿರ್ದೇಶನದ ಈ ಚೊಚ್ಚಲ ಚಿತ್ರವು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ‘ಮದರ್ ಪ್ರಾಮಿಸ್‘ ಚಿತ್ರದಲ್ಲಿ ನಾಗಭೂಷಣ, ವಿನಯಾ ಪ್ರಕಾಶ್, ಗುರುದತ್ ಜೊತೆಗೆ ಅನೇಕ ಹಾಸ್ಯ ನಟರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.