ಸೋಮವಾರ, ಅಕ್ಟೋಬರ್ 3, 2022
25 °C

'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾಕ್ಕೆ ಸಿಕ್ಕ ಎಡಚರ ನಟಿ ಧನು ಹರ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಎಡಗೈಯೇ ಅಪಘಾತಕ್ಕೆ ಕಾರಣ’ ಎಂಬ ವಿಭಿನ್ನ ಶೀರ್ಷಿಕೆ ಹೊತ್ತ ಹೊಸ ಸಿನಿಮಾದಲ್ಲಿ ‘ದೂದ್‌ ಪೇಢ’ ಖ್ಯಾತಿಯ ನಟ ದಿಗಂತ್‌ ನಾಯಕನಾಗಿ ನಟಿಸುತ್ತಿರುವ ವಿಚಾರ ಹಳೆಯದು. ಹೊಸ ವಿಷಯ ಏನೆಂದರೆ ಈ ಎಡಚರನಿಗೆ ಜೋಡಿಯಾಗಿ ಎಡಗೈಯೇ ಮುಂದಿರುವ ನಾಯಕಿಯೊಬ್ಬಳು ಸಿಕ್ಕಿದ್ದಾಳೆ! ದಿಗಂತ್‌ಗೆ ಜೋಡಿಯಾಗಿ ಸಿನಿಮಾದಲ್ಲಿ ಧನು ಹರ್ಷ ನಟಿಸಲಿದ್ದಾರೆ.

ಮೂಲತಃ ಬೆಂಗಳೂರಿನ ಧನು, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅವರು ಕನ್ನಡದಲ್ಲಿ ‘ಅರಿಹ’ ಎಂಬ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಸಿನಿಮಾದಲ್ಲಿ ಧನು, ದಿಗಂತ್‌ಗೆ ಜೋಡಿಯಾಗಿ ‘ರಾಧಿಕಾ’ ಎಂಬ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ‘ಎಡಗೈ’ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರುವ ಕಾರಣ ಈ ಪಾತ್ರ ವಿಶೇಷವಾಗಿದ್ದು, ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎನ್ನುವುದು ಧನು ಮಾತು. 

ಸಮರ್ಥ ಕಡಕೋಳ ರಚಿಸಿ ನಿರ್ದೇಶಿಸಲಿರುವ ಈ ಸಿನಿಮಾವನ್ನು ಗುರುದಥ್‌ ಗಾಣಿಗ ಮತ್ತು ಸಮರ್ಥ್‌ ಕಡಕೋಳ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ ತಿಂಗಳಾಂತ್ಯಕ್ಕೆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು