ಮೂರನೇ ಹಿಂದಿ ಚಿತ್ರಕ್ಕೆ ಧನುಷ್ ಸಜ್ಜು

ಮಂಗಳವಾರ, ಜೂನ್ 18, 2019
24 °C
ಧನುಷ್ ಹೊಸ ಚಿತ್ರ

ಮೂರನೇ ಹಿಂದಿ ಚಿತ್ರಕ್ಕೆ ಧನುಷ್ ಸಜ್ಜು

Published:
Updated:
Prajavani

ತಮಿಳಿನ ಖ್ಯಾತನಟ ಧನುಷ್ ಅಭಿನಯದ ‘ದಿ ಎಕ್ಸ್‌ಟಾರ್ಡಿನರಿ ಜರ್ನಿ ಆಫ್ ದಿ ಫಕೀರ್’ ಇಂಗ್ಲಿಷ್ ಸಿನಿಮಾ ಜೂನ್ 21ಕ್ಕೆ ತೆರೆಗೆ ಬರಲು ಸಿದ್ದವಾಗಿದೆ. ಈಚೆಗಷ್ಟೇ ಮುಂಬೈನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದ ಧನುಷ್ ಇದೇ ಸಂದರ್ಭದಲ್ಲಿ ಮತ್ತೊಂದು ಸಂತಸದ ಸುದ್ದಿಯನ್ನೂ ಪ್ರಕಟಿಸಿದ್ದಾರೆ.

ಧನುಷ್ ಮೂರನೇ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸೋನಂಕಪೂರ್‌ಗೆ ಜೋಡಿಯಾಗಿ ನಟಿಸಿದ್ದ ಧನುಷ್ ಅವರ ಮೊದಲ ಹಿಂದಿ ಚಿತ್ರ ‘ರಾಂಜಣ’ ಯಶಸ್ಸು ಗಳಿಸಿತ್ತು. ಈ ಸಿನಿಮಾ ಜೂನ್ 21ರಂದು ತೆರೆ ಕಂಡಿತ್ತು. ತಮಾಷೆಯೆಂದರೆ ಧನುಷ್ ಅವರ ಮೊದಲ ಹಾಲಿವುಡ್ ಸಿನಿಮಾ ಕೂಡಾ ಜೂನ್ 21ರಂದೇ ತೆರೆ ಕಾಣುತ್ತಿದೆ. ಈ ನಡುವೆ ಧನುಷ್ ತಮ್ಮ ಮಗ ಜೂನ್ 21ರಂದು ಜನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಧನುಷ್ ಪಾಲಿಗೆ ಜೂನ್ 21 ಅದೃಷ್ಟದ ದಿನವೆನ್ನಲು ಅಡ್ಡಿಯಿಲ್ಲ. 

‘ಶಮಿತಾಭ್’ ಹಿಂದಿ ಸಿನಿಮಾದ ನಂತರ ಧನುಷ್ ಯಾವುದೇ ಹಿಂದಿ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಕಾರಣ ಕೇಳಿದರೆ ಉತ್ತಮ ಚಿತ್ರಕತೆಯುಳ್ಳ ಸ್ಕ್ರಿಪ್ಟ್ ತಮ್ಮ ಬಳಿ ಬರಲಿಲ್ಲ ಅನ್ನುತ್ತಾರೆ ಅವರು. ಇಷ್ಟರಲ್ಲೇ ನಾನು ಮತ್ತೊಂದು ಹಿಂದಿ ಸಿನಿಮಾ ಮಾಡಲಿದ್ದೇನೆ ಎಂದೂ ಧನುಷ್ ತಣ್ಣಗೆ ಉತ್ತರಿಸುತ್ತಾರೆ. ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದು ಒಳ್ಳೆಯದೇ ಆಯಿತು ಅನ್ನೋದು ಅವರ ಮಾತು.

ಧನುಷ್ ಸದ್ಯಕ್ಕೆ ವೇಟ್ರಿ ಮಾರನ್ ಅವರ ‘ಅಸುರನ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಮೂರನೇ ಹಿಂದಿ ಚಿತ್ರವನ್ನು ಯಾರು ನಿರ್ದೇಶಸಲಿದ್ದಾರೆ? ನಾಯಕಿ ಯಾರು? ಚಿತ್ರದ ಕಥೆಯೇನು? ಎನ್ನುವ ಬಗ್ಗೆ ಧನುಷ್ ಇದುವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !