ಧನುಷ್ ಅಭಿನಯದ ತಮಿಳಿನ ಬಹುನಿರೀಕ್ಷಿತ ಚಿತ್ರ ‘ಕಾರಾ’ದಲ್ಲಿ ನಾಯಕಿಯ ಫಸ್ಟ್ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ನಾಯಕಿ ಮಮಿತಾ ಬೈಜು ಸೆಲ್ಲಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಘ್ನೇಶ್ ರಾಜ ನಿರ್ದೇಶನದ ಚಿತ್ರ ಏ.30ರಂದು ತೆರೆಗೆ ಬರಲಿದೆ. ‘ಕಾರಾಸಾಮಿ’ ಎಂಬ ಹತ್ತಿ ವ್ಯಾಪಾರಿ ಪಾತ್ರದಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಮಮಿತಾ ಬೈಜು ಗ್ರಾಮೀಣ ಪ್ರದೇಶದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮಿಳುನಾಡಿನ ಗ್ರಾಮೀಣ ಪ್ರದೇಶದ ಕಥೆಯಲ್ಲಿ ಮಮಿತಾ ಅವರ ಪಾತ್ರ ಭಾವುಕತೆಯಿಂದ ಕೂಡಿದೆ ಎಂಬುದು ಪೋಸ್ಟರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೆ.ಎಸ್.ರವಿಕುಮಾರ್, ಜಯರಾಮ್, ಸುರಾಜ್ ವೆನ್ಞಾರಮೂಡು ಸೇರಿದಂತೆ ಬಹುಭಾಷಾ ಕಲಾವಿದರು ಚಿತ್ರದಲ್ಲಿದ್ದಾರೆ. ಜಿ.ವಿ.ಪ್ರಕಾಶ್ ಸಂಗೀತ, ಥೇನಿ ಈಶ್ವರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.