ಮಂಗಳವಾರ, ಸೆಪ್ಟೆಂಬರ್ 28, 2021
22 °C

ಜನ್ಮದಿನದಂದು ಧನ್ವೀರ್‌ಗೆ ಸಿಗಲಿದೆ ‘ಬೈ ಟು ಲವ್‌’ ಗಿಫ್ಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಬೈ ಟು ಲವ್‌’ ಸಿನಿಮಾದ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ‘ಬಜಾರ್‌’ ಬಳಿಕ ನಟ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಫಸ್ಟ್‌ಲುಕ್‌ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಧ್ವನೀರ್‌ ಜನ್ಮದಿನಕ್ಕೆ(ಸೆ.8) ವಿಶೇಷ ಉಡುಗೊರೆ ನೀಡಲು ಚಿತ್ರತಂಡ ಸಜ್ಜಾಗಿದೆ. ಇದಕ್ಕಾಗಿ ವಿಶೇಷ ಕಟೆಂಟ್‌ ಒಂದನ್ನು ಚಿತ್ರತಂಡ ಸಿದ್ಧಪಡಿಸಿಕೊಂಡಿದೆ.  

ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ ಈ ಚಿತ್ರದಲ್ಲಿ ಲವರ್‌ ಬಾಯ್‌ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 70 ದಿನಗಳಿಗೂ ಹೆಚ್ಚು ಚಿತ್ರೀಕರಣವನ್ನು ನಡೆಸಲಾಗಿದ್ದು, ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಅನಿಸಿಕೆ. ನಟ ಗಣೇಶ್‌ ನಟನೆಯ ‘ಸಖತ್‌’, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ಗೆ ಬಂಡವಾಳ ಹೂಡಿದೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

‘ಈಗ ಟಾಕಿ ಭಾಗ ಮುಗಿಸಿದ್ದೇವೆ. ಎಲ್ಲರ ಸಹಕಾರದಿಂದ ಚಿತ್ರೀಕರಣ ಬೇಗ ಮುಗಿಸಲು ಸಾಧ್ಯವಾಯಿತು. ಧನ್ವೀರ್‌-ಶ್ರೀಲೀಲಾ ಜೋಡಿಯ ಮೋಡಿಯನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. ಎಂಟು ತಿಂಗಳ ಮಗೂ ಕೂಡ ಪ್ರಮುಖ ಪಾತ್ರಧಾರಿ. ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಇದು ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಿದ ಕಥೆ. ಹೀಗಾಗಿ ಎಲ್ಲರಿಗೂ ಹಿಡಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ಹರಿ ಸಂತೋಷ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು