ಎಲ್ಪಿಜಿ ಅಭಾವದಿಂದಾಗಿ ಆಟೊಗಳ ಸಂಚಾರ ಸ್ಥಗಿತಗೊಳ್ಳುತ್ತಿವೆ. ಇದೀಗ, ಚಂದನವನದ ನಟ ಧ್ರುವ ಸರ್ಜಾ ಅವರು ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ಧನ ಸಹಾಯದ ಜೊತೆ ಈ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡ ಅವರು, ‘ಆಟೊ ಚಾಲಕರು ನಮ್ಮ ದೇಶದ ಬೆನ್ನೆಲುಬು. ಅವರು ಪ್ರತಿದಿನ ದಿನ ದುಡಿದು ತಮ್ಮ ಕುಟುಂಬಕಕ್ಕೆ ಮಾತ್ರವಲ್ಲದೇ, ಸಾರ್ವಜನಿಕವಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಈ ಬಿಕ್ಕಟ್ಟಿನಿಂದ ಕುಟುಂಬದ ಜವಾಬ್ದಾರಿ ಹೊರಲು ಕಷ್ಟಪಡುತ್ತಿದ್ದಾರೆ. ಎಲ್ಲೂ ಎಲ್ಪಿಜಿ ಗ್ಯಾಸ್ ಸಿಗುತ್ತಿಲ್ಲ. ಎಲ್ಲಾ ಆಟೊಗಳು ನಿಂತಿವೆ’ ಎಂದು ಹೇಳಿದ್ದಾರೆ.

‘ಒಂದು ವೇಳೆ ಗ್ಯಾಸ್ ಸಿಕ್ಕಿದರೂ ಕೂಡ ಅದಕ್ಕೆ ಎರಡು ಪಟ್ಟು ಬೆಲೆ ನೀಡಿ ಖರೀದಿಸಬೇಕು. ಇಂತಹ ಕಷ್ಟದಲ್ಲೂ ತಮ್ಮ ಕುಟುಂಬವನ್ನು ನಿಭಾಯಿಸಲೇಬೇಕು. ನಾನು ಯಾವ ಪಕ್ಷದ ಬಗ್ಗೆಯೂ ಮಾತನಾಡುತ್ತಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಟೊ ಚಾಲಕರ ಪರವಾಗಿ ನಾನು ಮನವಿ ಮಾಡುಕೊಳ್ಳುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.