ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ ಚಿತ್ರ ಟ್ರೇಲರ್ ನಾಳೆ (ಏಪ್ರಿಲ್ 22) ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಈ ಕುರಿತು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು, ‘ಪ್ರತಿ ಕಾಲದಲ್ಲೂ ಒಂದು ಹೆಸರು ಇರುತ್ತೆ, ಅದನ್ನ ಯಾರೂ ಮರೆಯಲ್ಲ’ ಎಂಬ ಅಡಿಬರಹ ನೀಡಿದೆ.

ಈ ಚಿತ್ರದಲ್ಲಿ ‘ಕಾಲ ಭೈರವ’ ಪಾತ್ರದಲ್ಲಿ ಕಿಚ್ಚ ಸುದೀಪ್, ಢಾಕ್ ದೇವನಾಗಿ ಸಂಜಯ್ ದತ್ ನಟಿಸಿದ್ದಾರೆ. ಇವರು ಕಥೆಯ ಪ್ರಮುಖ ಖಳನಾಯಕ. ರವಿಚಂದ್ರನ್ ಅಣ್ಣಯ್ಯಪ್ಪನಾಗಿ ಕಾಣಿಸಿಕೊಂಡರೆ, ರಮೇಶ್ ಅರವಿಂದ್ ಧರ್ಮನ ಪಾತ್ರದಲ್ಲಿದ್ದಾರೆ. ಮಹಾಲಕ್ಷ್ಮಿಯಾಗಿ ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದು, ಸತ್ಯವತಿ ಪಾತ್ರದಲ್ಲಿ ಶಿಲ್ಪಾಶೆಟ್ಟಿ ನಟಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾವು ಏಪ್ರಿಲ್ 30ಕ್ಕೆ ಚಿತ್ರ ತೆರೆಗೆ ಬರಲಿದೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಅವರ ಛಾಯಾಚಿತ್ರಗ್ರಹಣ, ಸಂಕೇತ್ ಆಚಾರ್ ಸಂಕಲನವಿದೆ.

ಇನ್ನೂ, ಈ ಚಿತ್ರದ ‘ಸೆಟ್ಟಗಲ್ಲ’, ‘ಶಿವ ಶಿವ’, ‘ಅಣ್ತಮ್ಮ ಜೋಡೆತ್ತು ಕಣೋ’, ಹಾಡುಗಳು ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆದಿದ್ದರೆ, ಸಂಜಯ್ ದತ್ ಹಾಗೂ ನೋರಾ ಫತೇಹಿ ಹೆಜ್ಜೆ ಹಾಕಿದ ‘ಸರ್ಸೆ ಸರ್ಸೆ’ ವಿವಾದ ಸೃಷ್ಠಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.