ಮಂಗಳವಾರ, ನವೆಂಬರ್ 12, 2019
28 °C
ಮದುವೆಯ ಮಮತೆಯ ಕರೆಯೋಲೆ ಹಂಚಿಕೆ‌ ಶುರು

ಇದೇ 24ಕ್ಕೆ ಧ್ರುವ ಸರ್ಜಾ – ಪ್ರೇರಣಾ ಸಪ್ತಪದಿ

Published:
Updated:

ಬೆಂಗಳೂರು: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಅವರು‌ ನವೆಂಬರ್ 24ರಂದು ಸಪ್ತಪದಿ ತುಳಿಯಲಿದ್ದಾರೆ.

ಪ್ರೇರಣಾ ಅವರು ಧ್ರುವ ಅವರ ಬಾಲ್ಯದ ಗೆಳತಿ. ಕಳೆದ ವರ್ಷವೇ ಈ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು.

ಅಂದು ಈ ಇಬ್ಬರ ವಿವಾಹವು ಬೆಂಗಳೂರಿನ ಜೆ.ಪಿ. ನಗರದ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್‌ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಎರಡು ಕುಟುಂಬದಲ್ಲೂ ಮದುವೆ ಸಂಭ್ರಮ ಮನೆ ಮಾಡಿದೆ. ಲಗ್ನ ಪತ್ರಿಕೆ ಹಂಚಿಕೆ ಕಾರ್ಯವೂ ಆರಂಭಗೊಂಡಿದೆ.

ಧ್ರುವ ಮದುವೆಯಾಗುತ್ತಿರುವುದಕ್ಕೆ ಅವರ ಅಭಿಮಾನಿಗಳೂ ಖುಷಿಗೊಂಡಿದ್ದಾರೆ.

ಧ್ರುವ ಸರ್ಜಾ ನಟನೆಯ 'ಅದ್ದೂರಿ', 'ಬಹದ್ದೂರ್' ಮತ್ತು 'ಭರ್ಜರಿ' ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದಲ್ಲೂ ಧ್ರುವ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 20ರಂದು ಅಥವಾ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)