ಆದಿತ್ಯ ಧರ್ ನಿರ್ದೇಶನದಲ್ಲಿ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಮೂಡಿಬಂದಿದ್ದು, ಜಾಗತಿಕವಾಗಿ ಹೆಚ್ಚು ಗಳಿಕೆ ಕಂಡ 2ನೇ ಭಾರತೀಯ ಸಿನಿಮಾ ಎಂಬ ದಾಖಲೆ ಬರೆದಿದೆ. ಮಾತ್ರವಲ್ಲದೆ, ಬಾಹುಬಾಲಿ 2 ಸಿನಿಮಾದ ದಾಖಲೆಯನ್ನೂ ಮುರಿದಿದೆ.

ಸಕ್ನಿಲ್ಕ್ ಪ್ರಕಾರ ಧುರಂಧರ್ 2 ವಿಶ್ವದಾದ್ಯಂತ ₹1,788 ಕೋಟಿಗಳಿಗೂ ಹೆಚ್ಚು ಗಳಿಸಿ ₹1,790 ಕೋಟಿಗಳ ಮೈಲಿಗಲ್ಲಿನತ್ತ ಸಾಗುತ್ತಿದೆ. ಬಾಹುಬಲಿ 2 ಸಿನಿಮಾ ಒಟ್ಟಾರೆ ಜಾಗತಿಕವಾಗಿ ₹1,788 ಕೋಟಿ ಗಳಿಸಿತ್ತು. ಧುರಂಧರ್ 2 ಈ ದಾಖಲೆಯನ್ನು ಮೀರಿ ಮುನ್ನುಗ್ಗುತ್ತಿದೆ.

ದೇಶಿಯವಾಗಿ ಈ ಸಿನಿಮಾವು ₹1,362 ಕೋಟಿ ಗಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂದಾಜು ₹426 ಕೋಟಿ ಗಳಿಕೆ ಮಾಡಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಕುಖ್ಯಾತ ದರೋಡೆಕೋರ ಜಾಲಕ್ಕೆ ಭಾರತೀಯ ಗೂಢಾಚಾರ ನುಸುಳುವಿಕೆಯ ಸುತ್ತ ಸಿನಿಮಾದ ಕಥೆಯು ಸುತ್ತುತ್ತದೆ.

ಆಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ₹2,000 ಕೋಟಿ ಗಳಿಸುವ ಮೂಲಕ ಹೆಚ್ಚು ಗಳಿಸಿದ ಭಾರತೀಯ ಸಿನಿಮಾವಾಗಿ ದಾಖಲೆ ಬರೆದಿದೆ. ಈ ಪಟ್ಟಿಯಲ್ಲಿ ಬಾಹುಬಲಿ 2, ಆರ್ಆರ್ಆರ್ ಸಿನಿಮಾಗಳು ನಂತರದ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.