‘ಧುರಂಧರ್‘ ನಿರ್ದೇಶಕ ಆದಿತ್ಯಧರ್ ಪತ್ನಿ ಯಾಮಿ ಗೌತಮ್ ಅವರು ಕನ್ನಡಚಿತ್ರರಂಗದಲ್ಲಿ ನಂಟು ಹೊಂದಿದ್ದಾರೆ.
.Sandalwood: ‘ಬೃಂದಾವಿಹಾರಿ‘ಯಲ್ಲಿ ರಾಮನ ಜಪ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್.
2010ರಲ್ಲಿ ತೆರೆಕಂಡ ‘ಉಲ್ಲಾಸ ಉತ್ಸಾಹ‘ ಚಿತ್ರದ ಮೂಲಕ ಯಾಮಿ ಗೌತಮ್ ಅವರು ನಟನೆ ಆರಂಭಿಸಿದ್ದಾರೆ. ದೇವರಾಜ್ ಪಾಲನ್ ನಿರ್ದೇಶನದ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಅವರು ಮಹಾಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿರುವುದರ ಬಗ್ಗೆ ಯಾಮಿ ಗೌತಮ್ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಈ ಚಿತ್ರದ ‘ಚಲಿಸುವಾ ಚೆಲುವೇ’ ಹಾಡಿನಲ್ಲಿ ಯಾಮಿ ಗೌತಮ್ ಅವರು ಗಣೇಶ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ಈ ಹಾಡಿನ ಸಾಹಿತ್ಯವು ಪ್ರೇಕ್ಷಕರನ್ನು ಸೆಳೆದಿದೆ.

ಯಾಮಿ ಅವರು ಪತಿ ಆದಿತ್ಯಧರ್ ನಿರ್ದೇಶನದ ‘ಧುರಂಧರ್’ ಹಾಗೂ ‘ಉರಿ: ದ ಸರ್ಜಿಕಲ್ ಸ್ಟ್ರೈಕ್’ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.