ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಮಾರ್ಚ್19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದ ಟಿಕೆಟ್ಗಳು ಮಾರಾಟವಾಗಿವೆ.
.ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಟ್ರೇಲರ್ ಬಿಡುಗಡೆ.‘ಧುರಂಧರ್ 2’ ಸಿನಿಮಾ ಟ್ರೇಲರ್ ಬಿಡುಗಡೆಗೆ ಮುಹೂರ್ತ ನಿಗದಿ.
ದೀರ್ಘ ಅವಧಿಯ ಸಿನಿಮಾವಾಗಿರುವ ಧುರಂಧರ್: ದಿ ರಿವೆಂಜ್ನ ವೀಕ್ಷಣೆಗೆ ಮುಂಗಡವಾಗಿ 2.75 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ. ಈ ಮೂಲಕ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಒಟ್ಟು ದೇಶಿಯ ಗಳಿಕೆ ₹13.75 ಕೋಟಿ ಸಂಗ್ರಹವಾಗಿದೆ. ಇದರ ಜೊತೆಗೆ ಸಿನಿಮಾದ ಕೆಲವು ಟಿಕೆಟ್ಗಳು ಬ್ಲಾಕ್ನಲ್ಲಿ ಮಾರಾಟವಾಗಿವೆ. ಸಿನಿಮಾದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಒಟ್ಟು ಗಳಿಕೆ ₹19.46 ಕೋಟಿಗೆ ತಲುಪಿದೆ.

ಈ ಹಿಂದೆ ಪವನ್ ಕಲ್ಯಾಣ್ ನಟನೆಯ ಬೇಹುಗಾರಿಕ ಸಿನಿಮಾ 'OG', ಮುಂಗಡ ಟಿಕೆಟ್ ಖರೀದಿಯಲ್ಲಿ ₹25 ಕೋಟಿ ಗಳಿಸಿತ್ತು. ಇದೀಗ ಧುರಂಧರ್: ದಿ ರಿವೆಂಜ್ ಸಿನಿಮಾ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ. ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.

‘ಧುರಂಧರ್: ದಿ ರಿವೆಂಜ್’ ಸಿನಿಮಾದ ಟಿಕೆಟ್ಗಳು ವಿವಿಧ ಬೆಲೆಯಲ್ಲಿ ಲಭ್ಯವಿದ್ದು, ಗರಿಷ್ಠ ಟಿಕೆಟ್ ಬೆಲೆ ₹2,900 ಎಂದು ವರದಿಯಾಗಿದೆ. ಈ ಬೆಲೆಯ ಟಿಕೆಟ್ ಅತ್ಯಂತ ದುಬಾರಿ ಆಸನ ವ್ಯವಸ್ಥೆಯುಳ್ಳ ಮುಂಬೈನ ಐನಾಕ್ಸ್ ಮೆಗಾಪ್ಲೆಕ್ಸ್ನಲ್ಲಿದೆ. ಇನ್ನೊಂದೆಡೆ ಚೆನ್ನೈನ ಎಜಿಎಸ್ ಸಿನಿಮಾಸ್ನಲ್ಲಿ ಟಿಕೆಟ್ ಬೆಲೆ ₹59 ಇದೆ ಎಂದು ವರದಿಯಾಗಿದೆ.
.Toxic Vs Dhurandhar 2|ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ: ರಾಮ್ ಗೋಪಾಲ್ ವರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.