ಆಧಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸರಣಿಯ ಎರಡೂ ಸಿನಿಮಾಗಳು ವಿಶ್ವದಾದ್ಯಂತ ₹2000 ಕೋಟಿ ಗಳಿಸಿವೆ. ಆ ಮೂಲಕ ‘ಬಾಹುಬಲಿ’ ಹಾಗೂ ‘ಪುಷ್ಪ’ ನಂತರ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಗೇಮ್ ಚೇಂಜರ್ ಸಿನಿಮಾ ಎಂದು ಸಿನಿ ಪ್ರಿಯರು ವಿಮರ್ಶಿಸಿದ್ದಾರೆ.

ಸಕ್ನಿಲ್ಕ್ ವರದಿಯ ಪ್ರಕಾರ, ‘ಧರಂಧರ್ 2’ ಸಿನಿಮಾ ವಿಶ್ವದಾದ್ಯಂತ ₹919 ಕೋಟಿ ಗಳಿಸಿದೆ. ಆ ಮೂಲಕ ಕಾಂತಾರ ಅಧ್ಯಾಯ–1 ಚಿತ್ರದ ದಾಖಲೆಯನ್ನು ಮುರಿದಿದೆ. ಕಾಂತಾರ ಅಧ್ಯಾಯ–1 ವಿಶ್ವದಾದ್ಯಂತ ₹852.36 ಕೋಟಿ ಗಳಿಸಿತ್ತು. ಈ ದಾಖಲೆಯನ್ನು ಮುರಿದಿರುವ ಧುರಂಧರ್ –2 ದೇಶದಲ್ಲಿಯೇ ₹687.43 ಕೋಟಿ ಗಳಿಕೆ ಮಾಡಿದೆ.

ವಿದೇಶಗಳಲ್ಲಿಯೂ ಧುರಂಧರ್ 2 ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಉತ್ತರ ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಹೌಸ್ಪುಲ್ ಪ್ರದರ್ಶನ ಕಾಣುತ್ತಿದೆ. ಜತೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿರುವುದಾಗಿ ವರದಿಯಾಗಿದೆ.

ಭಾರತದ ಅತೀ ಹೆಚ್ಚು ಗಳಿಕೆಯ ಸಿನಿಮಾಗಳು

ದಂಗಲ್: ₹2070 ಕೋಟಿ

ಪುಷ್ಪ–2: ₹1742.10 ಕೋಟಿ

ಬಾಹುಬಲಿ–2: ₹1788.06 ಕೋಟಿ

ಕೆಜಿಎಫ್–2: ₹1215 ಕೋಟಿ

ಧುರಂಧರ್: ₹1307.35 ಕೋಟಿ

ಆರ್ಆರ್ಆರ್: ₹1230 ಕೋಟಿ

ಕಲ್ಕಿ 2898 ಎಡಿ: ₹1042.25 ಕೋಟಿ

ಜವಾನ್: ₹1160 ಕೋಟಿ

ಧುರಂಧರ್–2: ₹919 ಕೋಟಿ (ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದೆ)

ಕಾಂತಾರ ಅಧ್ಯಾಯ–1: ₹852.36 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.