ರಣ್ವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್–ದಿ ರಿವೇಂಜ್’ ಸಿನಿಮಾ ನಾಳೆ(ಮಾರ್ಚ್ 19) ಬಿಡುಗಡೆಯಾಗುತ್ತಿದ್ದು, ಮಾರ್ಚ್ 18ರ ಸಂಜೆ 5ರಿಂದಲೇ ಸಿನಿಮಾದ ಪೇಯ್ಡ್ ಪ್ರೀವ್ಯೂವ್ ಪ್ರದರ್ಶನ ಆರಂಭವಾಗಿತ್ತು.

ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರಿವ್ಯೂವ್ ಪ್ರದರ್ಶನಗಳು ಹೌಸ್ಫುಲ್ ಆಗಿದ್ದವು. ಮೊದಲ ದಿನವೇ ನಾಲ್ಕು ಲಕ್ಷಕ್ಕೂ ಅಧಿಕ ಟಿಕೆಟ್ಗಳು ಬಿಕರಿಯಾಗಿವೆ. ಮೊದಲ ಭಾಗವು ನಿರ್ಮಾಣ ಮಾಡಿದ್ದ ಹಲವು ದಾಖಲೆಗಳನ್ನು ಸೀಕ್ವೆಲ್ ಪುಡಿ ಮಾಡಲಿದೆ ಎಂಬ ಮಾತು ಬಾಲಿವುಡ್ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಬುಧವಾರದಂದು(ಮಾರ್ಚ್ 18) ಬುಕ್ ಮೈ ಶೋ ಆ್ಯಪ್ನಲ್ಲಿ ಪ್ರತಿ ಗಂಟೆಗೆ 35 ಸಾವಿರ ಟಿಕೆಟ್ಗಳು ಮಾರಾಟವಾಗಿವೆ.

‘ವಾರದ ಮಧ್ಯದಲ್ಲಿ ಸಿನಿಮಾ ಬಂದಿದೆ. ಬುಧವಾರದ ಪೇಯ್ಡ್ ಪ್ರಿವ್ಯೂವ್ನಿಂದಲೇ ₹45–50 ಕೋಟಿ ಗಳಿಕೆಯ ನಿರೀಕ್ಷೆಯಿದೆ. ನಮ್ಮ ವೇದಿಕೆಯ ಮೂಲಕವೇ ಮುಂಗಡ ಬುಕ್ಕಿಂಗ್ನಲ್ಲಿ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿದೆ. ಹಿಂದೆಂದೂ ಇಷ್ಟು ಟಿಕೆಟ್ ಮಾರಾಟವನ್ನು ನಾವು ನೋಡಿರಲಿಲ್ಲ. ಸಿನಿಮಾ ದೊಡ್ಡ ಮಟ್ಟದಲ್ಲಿ ಆರಂಭವಾಗಲಿದೆ’ ಎಂದಿದ್ದಾರೆ ಪಿವಿಆರ್ ಐನಾಕ್ಸ್ನ ವಹಿವಾಟು ಯೋಜನೆಯ ಮುಖ್ಯಸ್ಥ ಕಮಲ್ ಗ್ಯಾನ್ಚಂದಾನಿ.

ಮುಂಬೈ, ಪುಣೆ ಮತ್ತು ಅಹಮದಾಬಾದ್ನಲ್ಲಿ ತಡರಾತ್ರಿಯ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಮುಂಬೈನ ಚಿತ್ರಮಂದಿರವೊಂದರಲ್ಲಿ ಬುಧವಾರ ತಡರಾತ್ರಿ 2ಗಂಟೆ 15 ನಿಮಿಷಕ್ಕೆ ಮೊದಲ ಪ್ರದರ್ಶನವಿತ್ತು. ‘ಸಿನಿಮಾದ ಹಿಂದಿ ಭಾಗವು ಮೊದಲ ದಿನ ₹35–40 ಕೋಟಿ ಗಳಿಸಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾ ಹೊಸ ಬಾಕ್ಸ್ ಆಫೀಸ್ ದಾಖಲೆ ಬರೆಯಲಿದೆ’ ಎಂದು ಬುಕ್ ಮೈ ಶೋ ಸಿಒಒ ಆಶಿಶ್ ಸಕ್ಸೇನಾ ಅಂದಾಜಿಸಿದ್ದಾರೆ.

ಆರಂಭದಲ್ಲಿ ಸಿನಿಮಾದ ಅವಧಿ 3 ಗಂಟೆ 55 ನಿಮಿಷ ಎಂದು ಬುಕ್ ಮೈ ಶೋನಲ್ಲಿ ತೋರಿಸಲಾಗುತ್ತಿತ್ತು. ಇದೀಗ ಇದು 3 ಗಂಟೆ 49 ನಿಮಿಷಕ್ಕೆ ಇಳಿಕೆಯಾಗಿದೆ. ಸಿನಿಮಾದಲ್ಲಿ ‘ಜಸ್ಕಿರತ್ ಸಿಂಗ್ ರಂಗಿ’ ಹಾಗೂ ‘ಹಮ್ಜ ಅಲಿ ಮಜಾರಿ’ ಎಂಬ ಪಾತ್ರದಲ್ಲಿ ರಣ್ವೀರ್ ಕಾಣಿಸಿಕೊಳ್ಳುತ್ತಿದ್ದು, ಲಿಯಾರಿ ಎನ್ನುವ ನಗರದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವಲ್ಲಿಂದ ಕಥೆ ಆರಂಭವಾಗಲಿದೆ. 2025ರಲ್ಲಿ ತೆರೆಕಂಡ ‘ಧುರಂಧರ್’ನ ಮುಂದುವರಿದ ಕಥೆ ಇದಾಗಿದೆ. ಮೊದಲನೇ ಭಾಗ ಬಾಕ್ಸ್ ಆಫೀಸ್ನಲ್ಲಿ ₹1000 ಕೋಟಿಗೂ ಅಧಿಕ ಗಳಿಸಿತ್ತು. ಚಿತ್ರದಲ್ಲಿ ಆರ್.ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾವನ್ನು ಬಿ62 ಸ್ಟುಡಿಯೊಸ್ ನಿರ್ಮಾಣ ಮಾಡಿದ್ದು, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.