ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪಾಕಿಸ್ತಾನದಲ್ಲಿ ಈ ಸಿನಿಮಾಗೆ ನಿಷೇಧ ಹೇರಲಾಗಿದೆ. ಇದರ ನಡುವೆಯೂ ಪೈರೇಟೆಡ್ ಕಾಪಿಯನ್ನು ಪಾಕ್ನಲ್ಲಿ ವೀಕ್ಷಿಸಲಾಗುತ್ತಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ಸಿನಿಮಾವನ್ನು ಪೈರೇಟ್ ಮಾಡಿ, ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಧುರಂಧರ್ 2 ಸಿನಿಮಾವನ್ನು ವೀಕ್ಷಿಸುತ್ತಿರುವ ವಿಡಿಯೊ ಹಂಚಿಕೊಂಡು, ‘ಲಾಹೋರ್ನಲ್ಲಿ ಧುರಂಧರ್–2 ವೀಕ್ಷಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ.
.ಎಲ್ಲಾ ದಾಖಲೆಗಳನ್ನು ಮುರಿಯಲಿದೆ ‘ಧುರಂಧರ್–2’: ಸಿನಿ ವಿಮರ್ಶಕರ ನಿರೀಕ್ಷೆಗಳೇನು?.‘ಧುರಂಧರ್ 2’ ಸಿನಿಮಾ ಟ್ರೇಲರ್ ಬಿಡುಗಡೆಗೆ ಮುಹೂರ್ತ ನಿಗದಿ.
2025ರ ಡಿಸೆಂಬರ್ನಲ್ಲಿ ‘ಧುರಂಧರ್’ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾ ಪಾಕಿಸ್ತಾನದಲ್ಲಿ ಪ್ರಸಾರ ಮಾಡದಂತೆ ಅಲ್ಲಿನ ಸರ್ಕಾರ ಪ್ರಸಾರಕ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿತ್ತು. ಈ ನಡುವೆ 20 ಲಕ್ಷಕ್ಕೂ ಅಧಿಕ ಜನರು ಸಿನಿಮಾ ಡೌನ್ಲೋಡ್ ಮಾಡಿದ್ದರು ಎಂದು ವರದಿಯಾಗಿದೆ.

ಐಎಎನ್ಎಸ್ ವರದಿ ಮಾಡಿರುವಂತೆ, ‘ ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾದ ಪೈರೇಟ್ ಕಾಪಿಗಳು ಲಭ್ಯವಿದೆ. ಧುರಂಧರ್ ಸಿನಿಮಾ 2.0 ಮತ್ತು ರಯೀಸ್ ಸಿನಿಮಾಗಳನ್ನು ಮೀರಿಸಿ ಅತೀ ಹೆಚ್ಚು ಪೈರೇಟೆಡ್ಗೆ ಆದ ಸಿನಿಮಾವಾಗಿದೆ. ಇದರಿಂದಾಗಿ ನಿರ್ಮಾಪಕರಿಗೆ ಸುಮಾರು ₹50 ರಿಂದ ₹60 ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ’.

ಪಾಕಿಸ್ತಾನದ ಸಿಂಧ್ನ ಹಿರಿಯ ಪ್ರಾಂತೀಯ ಮಾಹಿತಿ ಸಚಿವ ಶಾರ್ಜೀಲ್ ಇನಾಮ್ ಮೆಮನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು, ‘ಭಾರತದ ಚಲನಚಿತ್ರವಾದ ಧುರಂಧರ್–2 ಪಾಕಿಸ್ತಾನದ ವಿರುದ್ಧ ತೋರಿಸಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ವಿಶೇಷವಾಗಿ ಲಿಯಾರಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಚಲನಚಿತ್ರೋದ್ಯಮ ನಕಾರಾತ್ಮಕ ಪ್ರಚಾರ ಮಾಡುತ್ತಿದೆ. ಲಿಯಾರಿ ಹಿಂಸೆಯಲ್ಲ, ಅದು ಸಂಸ್ಕೃತಿ, ಶಾಂತಿ, ಪ್ರತಿಭೆಗಳಿರುವ ಸ್ಥಳ. ಮುಂದಿನ ತಿಂಗಳು, ‘ಮೇರಾ ಲಿಯಾರಿ’ ಸಿನಿಮಾ ಬಿಡುಗಡೆಯಾಗಲಿದ್ದು, ಲಿಯಾರಿಯ ನಿಜವಾದ ಮುಖವನ್ನು ತೋರಿಸಲಾಗುತ್ತದೆ’ ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.