ಧುರಂದರ್ : ದಿ ರಿವೆಂಜ್ ಚಿತ್ರವನ್ನು ದಕ್ಷಿಣ ಭಾರತದ ನಟರು ಪ್ರಶಂಶಿಸಿರುವುದನ್ನು ನಟ ಪ್ರಕಾಶ್ ರಾಜ್ ಪರೋಕ್ಷವಾಗಿ ಟೀಕಿಸಿದ್ದಾರೆ. ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಚಿತ್ರ ಕುರಿತು ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ‘ಹಮ್ ದೋನೋ’ ಚಿತ್ರದ ‘ಅಭಿ ನಾ ಜಾವೋ ಚೋಡ್ ಕರ್’ ಹಾಡನ್ನು ಶೇರ್ ಮಾಡಿಕೊಂಡು ‘ಧುರಂಧರ್’ ನಿಂದ ನಾನು ತುಂಬಾ ದೂರ ಇದ್ದೇನೆ’ ಎಂದಿದ್ದರು.
.ರಣವೀರ್ ಸಿಂಗ್ ನಟನೆಯ ‘ಧುರಂಧರ್–2’ ಇಂದಿನಿಂದ ಕನ್ನಡದಲ್ಲಿ ಬಿಡುಗಡೆ.DKD: ತೀರ್ಪುಗಾರರ ಮನಗೆದ್ದು ಫಿನಾಲೆ ಟಿಕೆಟ್ ಪಡೆದ ಈ ಜೋಡಿ.
ಪ್ರಕಾಶ್ ರಾಜ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ವೆಲ್ಲು ಎಂಬುವರು ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಜೂನಿಯರ್ ಎನ್ಟಿಆರ್ ಮಹೇಶ್ ಬಾಬು ಸೇರಿದಂತೆ ಅನೇಕರು ಈ ಚಿತ್ರವನ್ನು ಪ್ರಶಂಸಿದ್ದಾರೆ. ಆದರೆ ಬಾಲಿವುಡ್ ನಟರು ಯಾರು ಕೂಡ ‘ಧುರಂಧರ್–2’ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದರು.

ಇವರ ಪೋಸ್ಟ್ಗೆ ಉತ್ತರಿಸಿದ ಪ್ರಕಾಶ್ ರಾಜ್, ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದಿದ್ದಾರೆ. ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಚಿತ್ರದ ಕುರಿತು ನಟಿ ರಮ್ಯಾ ಅವರು ‘ಧುರಂಧರ್2‘ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಹೋದರೆ ಸಮಯ ಹಾಗೂ ಹಣ ವ್ಯರ್ಥ ಆಗುತ್ತದೆ' ಎಂದಿದ್ದರು.

ರಾಜಮೌಳಿ ಅವರು ‘4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಕ್ಷಣದವರೆಗೂ ಜನರನ್ನು ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ ಎಂದು‘ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.