ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ನಿನ್ನೆ (ಮಾರ್ಚ್ 19) ಬಿಡುಗಡೆಯಾಗಿದೆ. ಈಗ, ಈ ಚಿತ್ರ ವೀಕ್ಷಿಸಿದ ನಟಿ ರಮ್ಯಾ ಅವರು, ‘ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಬರೆದುಕೊಂಡಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?

‘ಈ ಸಿನಿಮಾ ನೋಡುವುದು ಒಂದು ದೊಡ್ಡ ಸಾಹಸ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆ ಪರೀಕ್ಷೆ ಮಾಡಬೇಕು ಎಂಬುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ. ಈ ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಡಬಹುದು. ಕೆಲವು ದೃಶ್ಯಗಳಿಗೆ ನಗು ಬರುತ್ತದೆ. ಈ ಚಿತ್ರ ಒಟಿಟಿಗೆ ಬರುವವರೆಗೂ ಕಾಯಿರಿ. ಒಟಿಟಿಯಲ್ಲಿ ಈ ಚಿತ್ರ ವೀಕ್ಷಿಸಿಲು ಇಷ್ಟಇಲ್ಲದಿದ್ದರೆ, ಕನಿಷ್ಠ ಪಕ್ಷ ಬೇರೆ ಆಯ್ಕೆಗಳು ಇರುತ್ತವೆ. ಈ ಚಿತ್ರ ನೋಡುವುದಕ್ಕಾಗಿ ನಿಮ್ಮ ಹಣ ಹಾಗೂ ಸಮಯ ವ್ಯರ್ಥ ಮಾಡಬೇಡಿ’ ಎಂದಿದ್ದಾರೆ.

‘ಈ ಚಿತ್ರ ತುಂಬಾ ಬೋರ್ ಆಗುತ್ತದೆ. ಎಷ್ಟೋ ಸಲ ನಾನು ಇದನ್ನು ಯಾಕೆ ನೋಡ್ತಾ ಇದ್ದೀನಿ? ಅಂತ ನಿಮಗೆ ಅನ್ನಿಸಬಹುದು. ಈ ಚಿತ್ರ ನಿರ್ದೇಶಕರಿಗೆ ಮಾರ್ಚ್ 19ರಂದು ಬಿಡುಗಡೆ ಬಗ್ಗೆ ಸರಿ ಮಾಹಿತಿ ಇರಲಿಲ್ಲ ಅನಿಸುತ್ತದೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಎಲ್ಲವೂ ಪರಿಪೂರ್ಣ ಆಗದಿರುವುದು ಈ ಚಿತ್ರದಲ್ಲಿ ಎದ್ದು ಕಾಣಿಸುತ್ತಿದೆ. ‘ಧುರಂಧರ್’ ಮೊದಲ ಭಾಗಕ್ಕೆ ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆ ಚಿತ್ರದಲ್ಲಿ ಕಳೆ ಇತ್ತು. ಆದರೆ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಪ್ರೇಕ್ಷಕರು ಸಂಪೂರ್ಣವಾಗಿ ನಿರಾಸೆಗೊಂಡಿದ್ದಾರೆ. ಥಿಯೇಟರ್ನಲ್ಲಿ ಎಲ್ಲರಲ್ಲೂ ಆ ಬೇಸರ ಎದ್ದು ಕಾಣುತ್ತಿತ್ತು‘ ಎಂದು ಬರೆದುಕೊಂಡಿದ್ದಾರೆ.
.‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.
ಇದು ಸಿನಿಮಾನಾ ಅಥವಾ ಕೈಪಿಡಿಯಾ?

‘ಇದು ಕೇವಲ ಒಂದು ಸಿನಿಮಾ ಅಲ್ಲ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವನ್ನಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿ. ಈ ಚಿತ್ರದ ಒಂದೊಂದು ‘ದೃಶ್ಯವು ಕೈಪಿಡಿ’ ಇದ್ದಂತಿದೆ. ಇಂತಹ ಒಂದು ಕೈಪಿಡಿ ನಿಜಕ್ಕೂ ಈ ಚಿತ್ರಕ್ಕೆ ಬೇಕಿರಲಿಲ್ಲ. ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಜೊತೆಯೇ ಪೈಪೋಟಿಗಿಳಿದಂತಿದೆ. ‘ಮುಂದಿನ ದೃಶ್ಯವನ್ನು ಇನ್ನು ಎಷ್ಟು ಹಿಂಸಾತ್ಮಕವಾಗಿ ಮಾಡಬಹುದು? ಎಂದು ಅವರು ಯೋಚಿಸುತ್ತಾ ಹೋದಂತೆ ಈ ಚಿತ್ರವು ಅತಿರೇಕಕ್ಕೆ ಹೋಗಿದೆ. ಅದು ಎಷ್ಟರಮಟ್ಟಿಗೆ ಅಂದರೆ.. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ’ ಎಂದಿದ್ದಾರೆ.

‘ಈ ಚಿತ್ರದ ಇನ್ನೊಂದು ವಿಶೇಷ. ಒಬ್ಬ ಮನುಷ್ಯನ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದರೂ, ಆತ ಎದ್ದು ನಿಂತು ಅರಾಮವಾಗಿ ಡೈಲಾಗ್ ಹೊಡೆಯುತ್ತಾನೆ’ ಎಂದರೆ ಇದಕ್ಕಿಂತ ಉತ್ತಮ ಹಾಸ್ಯ ದೃಶ್ಯ ಇನ್ನೊಂದು ಇರಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ‘ಧುರಂಧರ್ 2’ ತುಂಬಾ ನಿರಾಸೆ ಮೂಡಿಸಿದೆ. ‘ರಣವೀರ್, ನೀವು ಇದಕ್ಕಿಂತ ಉತ್ತಮವಾದ ಕೆಲಸ ಮಾಡಬಲ್ಲಿರಿ‘. ಆದಿತ್ಯ ಧರ್ ಅವರೇ, ಈ ಅತಿರೇಕದ ದೇಶಪ್ರೇಮ ಮತ್ತು ಪ್ರಚಾರದ ಕಥೆಗಳು ಈಗ ಹಳೆಯದಾಗಿವೆ. ಇದರಿಂದ ಹೊರಬನ್ನಿ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.