ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿಗೆ ಹೊಸ ಸಿನಿಮಾ: ದಿಯಾ ಸಿನಿಮಾ ಬಳಿಕ ಸಿಕ್ಕ ಕಥೆ

Last Updated 13 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

‘ದಿಯಾ’ ಸಿನಿಮಾ ಮತ್ತು ಪೃಥ್ವಿ ಅಂಬರ್ ಕುರಿತು ಹೆಚ್ಚಿನ ವಿವರಣೆ ಸಿನಿಮಾ ಪ್ರೇಮಿಗಳಿಗೆ ಬೇಕಿಲ್ಲ. ಆ ಸಿನಿಮಾ ತನ್ನದೇ ಆದ ಹೆಸರು ಸಂಪಾದಿಸಿದೆ. ಪೃಥ್ವಿ ಅವರೂ ತಮ್ಮ ಅಭಿನಯದಿಂದ ಹೆಸರು ಸಂಪಾದಿಸಿಕೊಂಡಿದ್ದಾರೆ.

ನವೀನ್ ದ್ವಾರಕಾನಾಥ್ ನಿರ್ದೇಶನದ ಹೊಸ ಸಿನಿಮಾ ‘ಫಾರ್ Regn’ನಲ್ಲಿ ಪೃಥ್ವಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದರಲ್ಲಿ ಒಂದು ಕುತೂಹಲ ಇದೆ. ನವೀನ್ ಅವರು ತಮ್ಮ ಸಿನಿಮಾಕ್ಕೆ ಒಳ್ಳೆಯ ಲೊಕೇಷನ್ ಹುಡುಕಲು ಮಂಗಳೂರಿಗೆ ಹೋಗಿದ್ದರು. ಅಲ್ಲಿ, ಅವರು ಒಂದು ತುಳು ಸಿನಿಮಾ ನೋಡೋಣ ಎಂದು ‘2 ಎಕರೆ’ ಚಿತ್ರದ ಪ್ರದರ್ಶನ ಇದ್ದ ಸಿನಿಮಾ ಮಂದಿರದ ಒಳ ಹೊಕ್ಕರು. ಆ ಚಿತ್ರದಲ್ಲಿ ಪೃಥ್ವಿ ಅವರ ಅಭಿನಯ ಕಂಡ ನವೀನ್, ‘ನಮ್ಮ ಸಿನಿಮಾಕ್ಕೆ ಇವರೇ ಆಗಬಹುದಲ್ಲ’ ಎಂದು ಭಾವಿಸಿದರು.

ಪೃಥ್ವಿ ಅವರ ದೂರವಾಣಿ ಸಂಖ್ಯೆ ಪಡೆದು, ನಂತರ ಅವರನ್ನು ಸಂಪರ್ಕಿಸಿದರು. ಪೃಥ್ವಿ ಜೊತೆ ಮಾತನಾಡಿದಾಗ ಅವರು ‘ದಿಯಾ’ ಚಿತ್ರದಲ್ಲೂ ನಟಿಸಿದ್ದು ಗೊತ್ತಾಯಿತು. ನವೀನ್ ಅವರು ಬೆಂಗಳೂರಿಗೆ ಮರಳಿದ ನಂತರ ‘ದಿಯಾ’ ಚಿತ್ರವನ್ನೂ ವೀಕ್ಷಿಸಿದರು. ಈ ಮೂಲಕ ಪೃಥ್ವಿ ಅವರನ್ನು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು. ‘ನಮ್ಮದು ಹಾಸ್ಯ ಮತ್ತು ರೊಮ್ಯಾನ್ಸ್ ಹಳಿಯ ಮೇಲೆ ಸಾಗುವ ಸಿನಿಮಾ’ ಎಂದು ನವೀನ್ ತಿಳಿಸಿದರು.

ಮಂಗಳೂರು, ಬೆಂಗಳೂರು, ಸಕಲೇಶಪುರದಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ತಬಲಾ ನಾಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಾಣಿ ಅವರು ಚಿತ್ರದ ಸಂಭಾಷಣೆಯ ಕೆಲಸಗಳಲ್ಲೂ ಸಹಾಯ ಮಾಡುತ್ತಿದ್ದಾರಂತೆ. ನಾಯಕಿ ಯಾರು ಎಂಬುದು ಇನ್ನೂ ಅಂತಿಮ ಆಗಿಲ್ಲ. ಕಥಾನಾಯಕ ಬೆಂಗಳೂರಿನವ, ಕಥಾನಾಯಕಿ ಮಂಗಳೂರಿನವಳಾಗಿರುತ್ತಾಳೆ. ಕೊರೊನಾ ಸಮಸ್ಯೆ ನಿವಾರಣೆ ಆದ ನಂತರ ಚಿತ್ರೀಕರಣ ಶುರುವಾಗಲಿದೆ.

ಎನ್. ನವೀನ್ ರಾವ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಎಸ್.ಕೆ. ವಿವೇಕ್ ಅವರ ಛಾಯಾಗ್ರಹಣ, ಆರ್. ಹರೀಶ ಅವರ ಸಂಗೀತ ಚಿತ್ರಕ್ಕೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT