ಭಾನುವಾರ, ಆಗಸ್ಟ್ 18, 2019
25 °C

‘ಇಂಡಿಯನ್‌ 2’ ಕಾಜಲ್‌ ಅನುಮಾನ?

Published:
Updated:
Prajavani

ರಾಜಕೀಯ ಥ್ರಿಲ್‌ ವಸ್ತುವನ್ನೊಳಗೊಂಡ ‘ಇಂಡಿಯನ್‌ 2’ನಲ್ಲಿ ನಾಯಕಿ ಪಾತ್ರದಲ್ಲಿ ಕಾಜಲ್‌ ನಟಿಸುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಮೇ ತಿಂಗಳಲ್ಲಿ ಈ ಚಿತ್ರದಲ್ಲಿ ‘ಕಮಲಹಾಸನ್‌ ಜೊತೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಜೂನ್‌ನಲ್ಲಿ ಚಿತ್ರೀಕರಣಕ್ಕೆಂದು ಚಿತ್ರತಂಡವನ್ನು ಸೇರಿಕೊಳ್ಳಲಿದ್ದೇನೆ’ ಎಂದು ಅವರು ಈ ಹಿಂದೆ ಹೇಳಿದ್ದರು. 

ಆದರೆ ಭಾರಿ ನಿರೀಕ್ಷೆ ಉಂಟು ಮಾಡಿರುವ ಬಿಗ್‌ ಬಜೆಟ್‌ನ ‘ಇಂಡಿಯನ್‌ 2’ ಚಿತ್ರದ ಚಿತ್ರೀಕರಣ ಅನೇಕ ಕಾರಣಗಳಿಂದ ಮುಂದೂಡಲ್ಪಡುತ್ತಲೇ ಇದೆ. ಕಮಲಹಾಸನ್‌ ಅವರ ಬಿಗ್‌ಬಾಸ್‌ ತಮಿಳು ರಿಯಾಲಿಟಿ ಷೋ ಮುಕ್ತಾಯವಾದ ನಂತರ ಚಿತ್ರದ ಕೆಲಸ ಆರಂಭವಾಗುತ್ತದೆ ಎಂದು ಈ ಮೊದಲು ಘೋಷಿಸಿದ್ದರು. ಆದರೆ ವರ್ಷ ಕಳೆದರೂ ಈ ಸಿನಿಮಾದ ಕೆಲಸಗಳು ಆರಂಭವಾಗಿಲ್ಲ. ಕಾಜಲ್‌ ಅಗರ್‌ವಾಲ್‌ ಅವರು ಬೇರೆ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗ ‘ಇಂಡಿಯನ್‌ 2’ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದು ಕಷ್ಟ ಹಾಗೂ ಡೇಟ್‌ ಕೂಡ ನೀಡಲಾಗುವುದಿಲ್ಲ ಎಂಬ ಸುದ್ದಿ ಕೂಡ ಹರಡಿದೆ.

ಕಾಜಲ್‌ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಸದ್ಯ ಅವರು ಜಯಂ ರವಿ ಅವರ ‘ಕೋಮಲಿ’ ಹಾಗೂ ಶರ್ವಾನಂದ ಅವರ ‘ರಣರಂಗಂ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ‘ಕ್ವೀನ್‌’ ಚಿತ್ರದ ರಿಮೇಕ್‌ ‘ಪ್ಯಾರಿಸ್‌ ಪ್ಯಾರಿಸ್‌’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. 

ಇತ್ತೀಚಿನ ವರದಿ ಪ್ರಕಾರ ‘ಇಂಡಿಯನ್‌ 2’ ಚಿತ್ರದಲ್ಲಿ ಮುಖ್ಯ ನಾಯಕಿಯಾಗಿ ಐಶ್ವರ್ಯಾ ರಾಜೇಶ್‌ ಹಾಗೂ ಎರಡನೇ ನಾಯಕಿಯಾಗಿ ಪ್ರಿಯಾ ಭವಾನಿ ಶಂಕರ್‌ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಲೈಕಾ ಪ್ರೊಡಕ್ಷನ್ಸ್‌ ಅಡಿ ಈ ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದು, ಬಜೆಟ್‌ ವಿಚಾರದಿಂದಲೇ ಈ ಚಿತ್ರದ ಕೆಲಸಗಳು ತಡವಾಗುತ್ತಿವೆ. ನಿರ್ದೇಶಕ ಶಂಕರ್‌ ಬಜೆಟ್‌, ಸಿನಿಮಾ ಖರ್ಚನ್ನು ಅನ್ನು ಕಡಿಮೆ ಮಾಡುವುದಾಗಿ ಆಶ್ವಾಸನೆ ನೀಡಿದರೆ ಸಿನಿಮಾ ಕೆಲಸಕ್ಕೆ ಚಾಲನೆ ನೀಡುವುದಾಗಿ ಲೈಕಾ ಪ್ರೊಡಕ್ಷನ್ಸ್‌ ಷರತ್ತು ಹಾಕಿದೆ. 

1996ರಲ್ಲಿ ತೆರೆಕಂಡ ಕಮಲ್ ಹಾಸನ್ ಅಭಿನಯದ ‘ಇಂಡಿಯನ್’ ಚಿತ್ರದ ಮುಂದುವರಿಕೆಯ ಚಿತ್ರವಿದು. 

Post Comments (+)