ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.12 ರಂದು ಹಸೆಮಣೆ ಏರಲಿರುವ ದಿಗಂತ್ - ಐಂದ್ರಿತಾ

Last Updated 21 ನವೆಂಬರ್ 2018, 10:18 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರ ವಿವಾಹ ಡಿ.11, 12ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಸುಮಾರು ದಿನಗಳಿಂದ ಈ ಜೋಡಿಯ ಮದುವೆಯ ಬಗ್ಗೆ ಗಾಸಿಪ್‌ಗಳು ಹರಿದಾಡುತ್ತಿದ್ದವು. ಈ ಎಲ್ಲದಕ್ಕೂ ತೆರೆ ಎಳೆದ ಐಂದ್ರಿತಾ ವಿವಾಹದ ದಿನಾಂಕವನ್ನು ಶೂಟಿಂಗ್ ಸ್ಥಳದಲ್ಲಿ ಘೋಷಿಸಿದ್ದಾರೆ.

ನನ್ನ ಮದುವೆ ಡಿ.12ರಂದು ದಿಗಂತ್ ಜೊತೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನಿಶ್ಚಿತಾರ್ಥದ ಉಂಗುರ ತೊಟ್ಟ ಫೋಟೊ ಹಾಕಿರುವ ಐಂದ್ರಿತಾ, ಇಷ್ಟು ದಿನ ಇದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆಯುತ್ತಿದ್ದೇನೆ. ಈಗ ನನ್ನ ಜೊತೆ ಡೈಮಂಡ್ ಮತ್ತು ಡಿಂಪಲ್ ಎರಡೂ ಇದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ದಿಗಂತ್ ಅವರು ಐಂದ್ರಿತಾ ಜೊತೆಗಿನ ಅಪ್ಪುಗೆಯಭಾವಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಐಂದ್ರಿತಾ ರೇ ಹಾಗೂ ದಿಗಂತ್ 'ಮನಸಾರೆ', ‘ಪಾರಿಜಾತ’ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT