ಕನ್ನಡ ಚಿತ್ರರಂಗದ ದಿಲೀಪ್ ರಾಜ್ ಜೊತೆಗಿನ ಒಡನಾಟವನ್ನು ನಿರ್ದೇಶಕಿ ಸುಷ್ಮಾ ಭಾರದ್ವಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅವರೊಂದಿಗೆ ಕಳೆದ ನೆನಪುಗಳನ್ನು ಸ್ಮರಿಸಿದ ಸುಷ್ಮಾ, ́ನಿಮ್ಮ ಸುದ್ದಿ ಬಳಿಕ ಭಾರಿ ಬೇಜಾರಾಗುತ್ತಿದೆ. ಎದೆ ಮೇಲೆ ಸಾವಿರ ಕೇಜಿಯಷ್ಟು ಭಾರ ಕುಳಿತಿರುವ ಅನುಭವ ಆಗುತ್ತಿದೆ. ಯಾಕೆ ಹೀಗೆ? ಯಾರು ನೀವು? ಹೀಗೆ ಹೊರಟರೆ ನಿಮ್ಮನ್ನು ನಂಬಿಕೊಂಡು ಬದುಕುತ್ತಿರುವರ ಗತಿ ಏನು?. ಜೀವನ ಯಾವತ್ತೂ ನಮ್ಮ ಹತ್ತಿರ ಏನನ್ನೂ ಪ್ರಮಾಣ ಮಾಡಿಸಿಕೊಂಡಿಲ್ಲ. ದಿಲೀಪ ಮೊದಲ ಸಲ ನಿಮ್ಮನ್ನು ವಿಜಯನಗರದಿಂದ ಶೂಟಿಂಗ್ ಗಾಡಿಯಲ್ಲಿ ಕೂರಿಸಿಕೊಂಡು ಬರುವಾಗ ನಿಮ್ಮ ಮುಖದ ಮೇಲಿದ್ದ ಆ ನಗು ನನಗೆ ಇನ್ನೂ ನೆನಪಿದೆʼ ಎಂದಿದ್ದಾರೆ.

ʼಅದು 2001 ನೇ ಇಸವಿ ಇರಬೇಕು. ಕೆಲಸದ ನಿಯಮಿತ್ತ ಅದೆಷ್ಟು ಶೂಟಿಂಗಿಗೆ ರಾಮೋಜಿ ಫಿಲಂ ಸಿಟಿಗೆ ಹೋಗಿದ್ದೇವು. ʼನೀವು ನನಗೆ ಪ್ರತಿಬಾರಿಯೂ ʼಪೇಮೆಂಟ್ ಬಗ್ಗೆ ಸರಿಯಾಗಿ ಮಾತಾಡುʼ ಅಂತ ಅದೆಷ್ಟು ಸಲ ಬುದ್ಧಿ ಹೇಳಿದ್ದೀರಾ. ಎಷ್ಟೋ ಕಡೆಗಳಲ್ಲಿ ಅಣ್ಣನಾಗಿ ಜೊತೆ ನಿಂತಿದ್ದೀರಾ. ಎಲ್ಲವೂ ನೆನಪು ಇದೆʼ ಎಂದಿದ್ದಾರೆ.

ʼಹಿಗೋಂದು ದಿನ ಕೆಲಸ ಕೊಡಿಸು ಅಂದಾಗ.. ಕೆಲಸ ಕೊಡಿಸೋಕೆ ಆಗುತ್ತೊ ಇಲ್ಲವೊ ಒಟ್ಟಿನಲ್ಲಿ ಎಲ್ಲಾ ಕಡೆ ಸಂದರ್ಶನ ಕೊಡಿಸುತ್ತೇನೆ ಎಂದು ಹೇಳಿದ್ದರು. ಎಷ್ಟೋ ಜನ ಸಹಾಯ ಪಡೆದು ಮರೆಯುತ್ತಾರೆ. ನೀವು ಮಾಡಿದ ಸಹಾಯಕ್ಕೆ ಸದಾ ಚಿರಋಣಿಯಾಗಿರುತ್ತೇನೆ. ನೀವು ಹೀರೋ, ಪ್ರೊಡ್ಯೂಸರ್ ಆದಾಗಲೂ ಎಷ್ಟೇ ಎತ್ತರಕ್ಕೂ ಬೆಳೆದರೂ ಅಹಂಕಾರ ತೋರಿಸುತ್ತಿರಲಿಲ್ಲ. ನಿಮ್ಮ ನೆನಪು ಸದಾ ನಮ್ಮ ಮನದಲ್ಲಿರುತ್ತದೆʼ ಎಂದು ಹೇಳಿಕೊಂಡಿದ್ದಾರೆ.

ದಿಲೀಪ್ ಅವರಿಗೆ ಸಂತಾಪ ಸೂಚಿಸಿ ಪೋಸ್ಟ್ ಹಂಚಿಕೊಂಡ ನಿರ್ದೇಶಕ ಯೋಗರಾಜ್ ಭಟ್, ʼಇದು ಕೆಲವೊಬ್ಬರ ಜೊತೆ ಅವಸರದಿಂದ ವರ್ತಿಸುವುದಕ್ಕೆ ನಿರ್ದಶನ.. ನಿಮ್ಮ ನೆನಪು ಎಂದಿಗೂ ಜೀವಂತ.ನೈಜ್ಯ ಕಲಾವಿದನ ಬಾಳು ಸಭ್ಯ ವ್ಯಕ್ತಿತ್ವಕ್ಕೆ ನಮನʼ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.