ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದಿಲೀಪ್ ಪುತ್ರಿ ಮದುವೆಗೆ ನೆಟ್ಟಿಗರಿಂದ ಮೆಚ್ಚುಗೆ

Last Updated 16 ಡಿಸೆಂಬರ್ 2021, 10:42 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಹಾಗೂ ಕಿರಯತೆರೆ ನಟ ದಿಲೀಪ್‌ ಜೋಶಿ ಅವರ ಪುತ್ರಿ ನಿಯಾತಿ ನೆಟ್ಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹೌದು, ನಿಯಾತಿ ಇತ್ತೀಚೆಗೆ ಅದ್ದೂರಿಯಾಗಿ ಗುಜರಾತಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ತಮ್ಮ ಮದುವೆ ಫೋಟೊಗಳ ಮೂಲಕ ನಿಯಾತಿ ನೆಟ್ಟಿಗರ ಮನ ಗೆದಿದ್ದಾರೆ.

ನಿಯಾತಿ ಅವರು ತಮ್ಮ ಬಹುಕಾಲದ ಗೆಳೆಯ ಯಶೋಧರ ಅವರನ್ನು ಮದುವೆಯಾದರು. ಅವರು ಮದುವೆ ಸಂಭ್ರದಲ್ಲಿ ಮೇಕಪ್‌ಗೆ ಮಾನ್ಯತೆ ಕೊಡದೆ ಸರಳವಾಗಿ ವಿವಾಹವಾಗಿದ್ದಾರೆ.

ನಿಯಾತಿ ತಲೆಯಲ್ಲಿ ಸಾಕಷ್ಟು ಬಿಳಿ ಕೂದಲುಗಳು ಇದ್ದರೂ ಅವುಗಳಿಗೆ ಬಣ್ಣ ಹಚ್ಚದೇ ( ಡೈ) ಸರಳವಾಗಿ ಮದುವೆ ಕಾರ್ಯಕ್ರಮ ಮುಗಿಸಿದ್ದಾರೆ. ಮದುವೆಯ ಫೋಟೊ ಹಾಗೂ ವಿಡಿಯೊಗಳಲ್ಲೂ ನಿಯಾತಿ ಅವರ ಬಿಳಿ ಕೂದಲುಗಳು ಕಾಣುತ್ತವೆ.

ಮದುವೆ ಅಂದ್ರೆ ಎಲ್ಲರೂ ಮೇಕಪ್‌ ಮಾಡುವುದು ಸಹಜ. ಬಿಳಿ ಕೂದಲುಗಳಿಗೆ ಡೈ ಮಾಡುತ್ತಾರೆ, ಆದರೆ ನಿಯಾತಿ ಮೇಕಪ್‌ ಮಾಡದೇ ಸಹಜವಾಗಿ ಮದುವೆಯಾಗಿ ಮಾದರಿಯಾಗಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT