ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಲ್‌ರಾಜು ಮನೆಯಲ್ಲಿ ಸಂಭ್ರಮ: ಮಗುವಿನ ನಿರೀಕ್ಷೆಯಲ್ಲಿ ತೆಲುಗು ನಿರ್ಮಾಪಕ 

Last Updated 21 ಮಾರ್ಚ್ 2022, 10:44 IST
ಅಕ್ಷರ ಗಾತ್ರ

ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್‌ರಾಜು ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವರಎರಡನೇ ಪತ್ನಿ ಗರ್ಭೀಣಿಯಾಗಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ದಿಲ್‌ರಾಜು ಅವರ ಮೊದಲ ಪತ್ನಿ ಅನಿತಾ 2017ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. 2020ರ ಲಾಕ್‌ಡೌನ್‌ ಸಮಯದಲ್ಲಿ ಅವರು ತೇಜಸ್ವಿನಿಎಂಬುವರನ್ನು ಮದುವೆಯಾಗಿದ್ದರು. ಇದೀಗ ತೇಜಸ್ವಿನಿಗರ್ಭಿಣಿಯಾಗಿದ್ದು ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 51ನೇ ವರ್ಷದಲ್ಲಿ ದಿಲ್‌ರಾಜು ತಂದೆಯಾಗುತ್ತಿರುವುದಕ್ಕೆ ಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ.

ದಿಲ್‌ರಾಜು ಅವರು ಮೊದಲ ಪತ್ನಿಯ ಪುತ್ರಿ ಹಂಶಿತಾ ರೆಡ್ಡಿ ಒತ್ತಾಯದ ಮೇರೆಗೆ ಎರಡನೇ ಮದುವೆಯಾಗಿದ್ದರು. ಹಂಶಿತಾ ರೆಡ್ಡಿಗೂ ಮದುವೆಯಾಗಿದ್ದು ಅವರಿಗೆ ಗಂಡು ಮಗು ಇದೆ. ಪತ್ನಿ ಗರ್ಭೀಣಿಯಾಗಿರುವ ಬಗ್ಗೆ ದಿಲ್‌ ರಾಜ್‌ ಅವರು ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ.

ದಿಲ್‌ರಾಜು ಅವರು ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ದಿಲ್‌, ಆರ್ಯಾ, ಭದ್ರ, ಬೊಮ್ಮರಿಲ್ಲು, ಪೋಕಿರಿ, ಆರ್ಯಾ–2, ಫಿದಾ, ಡಾರ್ಲಿಂಗ್‌ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT