ಡಿಪ್ಪಿ ಕಣ್ಣು ಮಾರ್ವೆಲ್‌ ಮೇಲೆ!

ಬುಧವಾರ, ಏಪ್ರಿಲ್ 24, 2019
33 °C

ಡಿಪ್ಪಿ ಕಣ್ಣು ಮಾರ್ವೆಲ್‌ ಮೇಲೆ!

Published:
Updated:
Prajavani

ಬಿ ಟೌನ್‌ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್‌ನಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿಯಾಗಿದೆ. ತ್ರಿಪಲ್‌ ಎಕ್ಸ್‌ ಚಿತ್ರದಲ್ಲಿ ವಿನ್‌ ಡೀಸೆಲ್‌ ಜೊತೆ ಅಮೋಘವಾಗಿ ಅಭಿನಯಿಸಿ ಹಾಲಿವುಡ್‌ ಮಂದಿಯ ಗಮನ ಸೆಳೆದು ವರ್ಷಗಳೇ ಸಂದಿವೆ. ಈಗ, ಮಾರ್ವೆಲ್‌ ಅವೆಂಜರ್ಸ್‌ನಲ್ಲಿ ಸೂಪರ್‌ ಹೀರೊ ಆಗಿ ನಟಿಸುವ ಆಸೆಯನ್ನು ಲಂಡನ್‌ನಲ್ಲಿ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ದೀಪಿಕಾ, ಇಂಗ್ಲಿಷ್‌ ಸರಣಿ ಮತ್ತು ಹಾಲಿವುಡ್‌ನಲ್ಲಿ ಕಾಲೂರುವ ಬಯಕೆ ಹೊಂದಿರುವುದು ಸ್ಪಷ್ಟ.

ಬಾಲಿವುಡ್‌ನಲ್ಲಿ ಪಳಗಿದ ನಟ ನಟಿಯರಿಗೆ ಹಾಲಿವುಡ್‌ ಚಿತ್ರಗಳ ಮೂಲಕ ಜಾಗತಿಕ ಚಿತ್ರರಂಗಕ್ಕೆ ಧುಮುಕುವ ಅಪೇಕ್ಷೆ ಇದ್ದೇ ಇರುತ್ತದೆ. ಕೆಲವರು ಅದರಲ್ಲಿ ಯಶಸ್ವಿಯಾಗಿದ್ದೂ ಇದೆ. ಹಾಗಿರುವಾಗ, ಯಾವುದೇ ಬಗೆಯ ಪಾತ್ರಕ್ಕೆ ಸೈ ಎನ್ನುವ ದೀಪಿಕಾಗೆ ಬಾಲಿವುಡ್‌, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಬೇಕು ಎಂದು ಎನಿಸಿದ್ದರೆ ಅಚ್ಚರಿಯೇನಿಲ್ಲ. 

ಲಂಡನ್‌ನಲ್ಲಿ ಮೇಡಂ ಟುಸಾಡ್ಸ್‌ ಮ್ಯೂಸಿಯಂನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣ ಮಾಡಿದ ಸಂದರ್ಭದಲ್ಲಿ ದೀಪಿಕಾ ಮಹತ್ವದ ಈ ಇಂಗಿತ ವ್ಯಕ್ತಪಡಿಸಿದ್ದಾರೆ. 

ಕಾಮಿಕ್‌ ಬುಕ್‌ ಆಧರಿತ ಸೂಪರ್‌ ಹೀರೊ ಸರಣಿಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿರುವ ಮಾರ್ವೆಲ್‌ ಸಿನೆಮ್ಯಾಟಿಕ್‌ ಯುನಿವರ್ಸ್‌ನ ಮಾರ್ವೆಲ್‌ ಅವೆಂಜರ್ಸ್‌ನಲ್ಲಿ ಸೂಪರ್‌ ಹೀರೊ ಪಾತ್ರ ಮಾಡುವುದು ದೀಪಿಕಾ ಬಯಕೆ. ದಿಗ್ಗಜ ಸಂಸ್ಥೆ ದೀಪಿಕಾ ಅವರ ಮುಕ್ತ ಮಾತುಗಳಿಗೆ ಮನ್ನಣೆ ಕೊಟ್ಟರೆ, ಅವರೇ ಹೇಳಿರುವಂತೆ ಭಾರತದ ನಟಿಯೊಬ್ಬರು ಸೂಪರ್‌ ಹೀರೊ ಆಗಿ ಜಾಗತಿಕ ವೇದಿಕೆಯಲ್ಲಿ ರಂಜಿಸುವ ದಿನ ದೂರವಿರಲಾರದು.

ಅಂತರರಾಷ್ಟ್ರೀಯ ಮಟ್ಟದಲ್ಲಿ ದೀಪಿಕಾ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಜಾಹೀರಾತುಗಳಲ್ಲಷ್ಟೇ ಅಲ್ಲದೆ ಕಾನ್ ಚಿತ್ರೋತ್ಸವದಂತಹ ಪ್ರಮುಖ ವೇದಿಕೆಗಳಲ್ಲಿ ದೀಪಿಕಾ ತಮ್ಮ ಛಾಪನ್ನು ಮೂಡಿಸಿದ್ದಾಗಿದೆ. ಅಮೆರಿಕದ ವೋಗ್‌ ನಿಯತಕಾಲಿಕ ಇತ್ತೀಚಿನ ಸಂಚಿಕೆಯಲ್ಲಿ ಜಗತ್ತಿನ 14 ಮಂದಿ ಮಹತ್ವದ ನಟ ನಟಿಯರನ್ನು ‘ಗ್ಲೋಬಲ್‌ ಟ್ಯಾಲೆಂಟ್‌’ ಎಂದು ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಪೈಕಿ ದೀಪಿಕಾ ಪಡುಕೋಣೆ ಒಬ್ಬರು! ದಕ್ಷಿಣ ಕೊರಿಯಾದ ನಟಿ ಡೂನಾ ಬೇ ಮತ್ತು ಅವೆಂಜರ್ಸ್‌: ಎಂಡ್‌ಗೇಮ್‌ ನಟಿ ಸ್ಕಾರ್ಲೆಟ್‌ ಜೊಹಾನ್ಸನ್‌ ಜೊತೆಗೆ ದೀಪಿಕಾ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !