ಸೋಮವಾರ, ಜುಲೈ 4, 2022
21 °C

ಕುತೂಹಲ ಹುಟ್ಟಿಸಿದ ‘ಆ್ಯಕ್ಟ್ 1978’ ಟ್ರೈಲರ್; ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಟ್ರೈಲರ್ ಬಿಡುಗಡೆ ಮಾಡಿದ್ದರು.

ಗರ್ಭಿಣಿ ಹೆಂಗಸೊಬ್ಬಳು ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು, ಕೈಯಲ್ಲಿ ‍ಪಿಸ್ತೂಲ್ ಹಿಡಿದು ನ್ಯಾಯಕ್ಕಾಗಿ ಸರ್ಕಾರಿ ಕಚೇರಿಯನ್ನೇ ಹೈಜಾಕ್‌ ಮಾಡುವ ದ್ರಶ್ಯವು ಟ್ರೈಲರ್‌ನಲ್ಲಿದೆ. ಟ್ರೈಲರ್ ನೋಡಿದರೆ ಸಮಾಜ ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅನ್ಯಾಯದ ವಿರುದ್ಧ ನಡೆಸುವ ಹೋರಾಟಕ್ಕೆ ಸಂಬಂಧಿಸಿದ ಚಿತ್ರ ಇದಾಗಿದೆ ಎನ್ನಿಸುತ್ತದೆ. ಗರ್ಭಿಣಿ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಯಜ್ಞಾ ಶೆಟ್ಟಿ. ಈ ಹಿಂದೆ ಪೋಸ್ಟರ್ ಮೂಲಕ ಈ ಚಿತ್ರ ಕುತೂಹಲ ಹುಟ್ಟುಹಾಕಿತ್ತು.

ಚಿತ್ರದಲ್ಲಿ ಬಿ. ಸುರೇಶ್‌, ಪ್ರಮೋದ್ ಶೆಟ್ಟಿ, ದತ್ತಣ್ಣ, ಅಚ್ಚುತ್‌ಕುಮಾರ್, ಶ್ರುತಿ, ಕಿರಣ್ ಕುಮಾರ್‌, ಸಂಚಾರಿ ವಿಜಯ್, ಶೋಭ್‌ರಾಜ್ ಮೊದಲಾದವರು ನಟಿಸಿದ್ದಾರೆ.

ಟ್ರೈಲರ್ ನೋಡಿದ ಮೆಚ್ಚಿಕೊಂಡಿರುವ ಸಿನಿ ಪ್ರೇಕ್ಷಕರು ಸಿನಿಮಾದ ಬಗ್ಗೆ ಕಾತರರಾಗಿರುವುದು ಸುಳ್ಳಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು