ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ 'KD' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಸ್ವತಃ ಸಂಗೀತ ನಿರ್ದೇಶಕ ಪ್ರೇಮ್ ಅವರೇ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ಯಾರೂ ಸಹ ಬೇಕು ಅಂತಲೇ ಅಥವಾ ತಿಳಿದು-ತಿಳಿದು ತಪ್ಪು ಮಾಡುವುದಿಲ್ಲ. ಸಾಕಷ್ಟು ಹಾಡುಗಳನ್ನು ನಾನು ಈವರೆಗೆ ಬರೆದಿದ್ದೇನೆ. ತಾಯಿಯ ಬಗ್ಗೆ, ದೇವರ ಬಗ್ಗೆ, ಅಣ್ಣ-ತಮ್ಮ, ಪ್ರೀತಿ ಬಗ್ಗೆ, ಜನಪದ ಹೀಗೆ ಹಲವು ರೀತಿ ಹಾಡು ಬರೆದಿದ್ದೀನಿ" ಎಂದಿದ್ದಾರೆ.

ಜನ ಸಹ ಪ್ರೇಮ್ ಸಿನಿಮಾನಲ್ಲಿ ಒಳ್ಳೆಯ ಹಾಡುಗಳು ಇರುತ್ತವೆ ಎಂದೇ ಸಿನಿಮಾ ನೋಡಲು ಬರುತ್ತಾರೆ. ಅದಕ್ಕೆ ನಾನು ಸದಾ ಋಣಿಯಾಗಿ ಇರುತ್ತೇನೆ. ಈ ಹಾಡು ಬರೆದಾಗ ನಾನು ಬೇರೆಯದೇ ದೃಷ್ಟಿಕೋನದಿಂದ ಬರೆದಿದ್ದೆ’ ಎಂದಿದ್ದಾರೆ.

‘ಅದನ್ನು ಬರೆಯುವಾಗ ನಾನು ಬರೆದೆ ಎಣ್ಣೆ ಬಾಟಲಿ, ಉಪ್ಪಿನಕಾಯಿ ಇದನ್ನು ಕಲ್ಪಿಸಿಕೊಂಡೆ. ಬಾಟಲ್ನ ಮೇಲೆತ್ತಿ ಎಂದು ಬರೆಯಬೇಕಿತ್ತು ಆದರೆ ಆ ಬಾಟಲಿ ಪದವನ್ನು ನಾನು ಕೊನೆಯಲ್ಲಿ ಬಳಸಿದೆ. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ' ಎಂದು ಬೇಸರ ಹೊರಹಾಕಿದ್ದಾರೆ'.

'ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು, ದೂಷಿಸಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲೈಕ್ , ಕಮೆಂಟಿಗಾಗಿ ವಿಡಿಯೋ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ.

ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ಗೊಂದಲ ಇತ್ತು. ಕೆಲವು ಪದಗಳು ನನಗೆ ಇಷ್ಟವಾಗಲಿಲ್ಲ. ಆದರೆ ಭಾಷೆ ಸಮಸ್ಯೆಯಿಂದ ನಾನು ಪ್ರಶ್ನೆ ಮಾಡಲಿಲ್ಲ. ಆದರೆ ಹಿಂದಿ ಹಾಡು ಬರೆದಿರುವ ರತಿ ಬಾಲಮ್ ಅವರು ಎಲ್ಲಾ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ. ಅಸಲಿಗೆ ನನ್ನ ಹಿಂದಿನ ಹಿಟ್ ಹಾಡುಗಳನ್ನು ಕನ್ನಡದಿಂದ ಹಿಂದಿಗೆ ಬರೆದಿದ್ದು ಕೂಡ ಅವರೇ. ಆದರೆ ಅವರು ಸಮಜಾಯಿಷಿಕೊಳ್ಳಲಿಲ್ಲ, ಎಲ್ಲ ತಪ್ಪು ನನ್ನ ಮೇಲೆ ಹಾಕಿದರು, ಬಹುಷಃ ಭಯಪಟ್ಟು ನನ್ನ ಮೇಲೆ ಹಾಕಿದ್ದಾರೆ’ ಎಂದಿದ್ದಾರೆ

ನಟಿ ನೋರಾ ಫತೇಹಿ ಸ್ಪಷ್ಟನೆ ಬಗ್ಗೆ ಮಾತನಾಡಿರುವ ಅವರು, ‘ನೋರಾ ಮಾತನಾಡಿರುವುದು ತಪ್ಪು. ಅವರಿಗೆ ಸಾಹಿತ್ಯ ಗೊತ್ತಿತ್ತು. ಸಾಹಿತ್ಯ ಗೊತ್ತಿಲ್ಲದೆ ಯಾವ ನಟರೂ ನಟಿಸುವುದಿಲ್ಲ, ಸಾಹಿತ್ಯ ಗೊತ್ತಿಲ್ಲದೆ ಎಕ್ಸ್ಪ್ರೆಷನ್ ಹೇಗೆ ಬರುತ್ತೆ? ಅವರು ಹಾಗೆ ಮಾತನಾಡಬಾರದಿತ್ತು. ಈಗ ಆಗಿರುವ ವಿವಾದದಿಂದ ತಪ್ಪಿಸಿಕೊಳ್ಳಲು ಹಾಗೆ ಮಾಡಿದ್ದಾರೆ ಅನಿಸುತ್ತದೆ. ಇತ್ತೀಚೆಗೆ ನಡೆದ ಆಡಿಯೋ ಪ್ರೋಗ್ರಾಂನಲ್ಲಿ ಸಹ ಅವರು ಹಾಡಿನ ಬಗ್ಗೆ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದರು. ಆದರೆ ಈಗ ಹೀಗೆ ಮಾತನಾಡುತ್ತಿದ್ದಾರೆ. ನಾನು ಹಾಡನ್ನು ಸರಿಪಡಿಸಿ ಮತ್ತೆ ಅಪ್ಲೋಡ್ ಮಾಡುತ್ತೇನೆ" ಎಂದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.