ಸಲ್ಲೂ ಸಿನಿಮಾದಲ್ಲಿ ದಿಶಾ ಪಟಾನಿ!

7

ಸಲ್ಲೂ ಸಿನಿಮಾದಲ್ಲಿ ದಿಶಾ ಪಟಾನಿ!

Published:
Updated:

ಬಾಲಿವುಡ್‌ನ ಉದಯೋನ್ಮುಖ ನಟಿ ದಿಶಾ ಪಟಾನಿ ಅವರತ್ತಲೇ ಈಗ ಸಿನಿಪ್ರಿಯರ ಕಣ್ಣುಗಳು ನೆಟ್ಟಿವೆ. ಮೊದಲ ಸಿನಿಮಾದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ದಿಶಾ, ಟೈಗರ್ ಶ್ರಾಫ್ ಜತೆಗೆ ‘ಭಾಗಿ–2’ ಸಿನಿಮಾ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಇನ್ನೂ ಹರಿದಾಡುತ್ತಿರುವಾಗಲೇ ಮತ್ತೊಮ್ಮೆ ಎಲ್ಲರ ಚಿತ್ತ ಸೆಳೆದಿದ್ದಾರೆ.

ಸಲ್ಮಾನ್ ಖಾನ್ ಅವರ ಬಹು ಮಹತ್ವಾಕಾಂಕ್ಷೆಯ ಚಿತ್ರವಾಗಿರುವ ‘ಭಾರತ್‌’ನಲ್ಲಿ ದಿಶಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಹುಮುಖ್ಯ ಪಾತ್ರದಿಂದ ನಟಿ ಪ್ರಿಯಾಂಕಾ ಚೋಪ್ರ ಹಿಂದೆ ಸರಿದ ಬೆನ್ನಲ್ಲೇ ದಿಶಾ ಸೇರ್ಪಡೆ ಹಲವರ ಹುಬ್ಬೇರುವಂತೆ ಮಾಡಿದೆ.

ಟೈಗರ್ ಶ್ರಾಫ್ ಜತೆಗಿನ ಸ್ನೇಹ ಮತ್ತು ಫಿಟ್‌ನೆಸ್ ಕ್ರೇಜ್‌ನಿಂದಾಗಿ ಜನಪ್ರಿಯರಾಗಿದ್ದ ದಿಶಾ, ಸಲ್ಲೂ ಸಿನಿಮಾದ ಬಹುಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವುದು ಕೆಲ ನಟಿಯರ ಹೊಟ್ಟೆಕಿಚ್ಚಿಗೂ ಕಾರಣವಾಗಿದೆಯಂತೆ. ‘ಭಾರತ್’ ಸಿನಿಮಾದ ಬಗ್ಗೆ ದಿಶಾ ಎಲ್ಲೂ ಮಾತಾಡಿಲ್ಲವಾದರೂ ಆ ಚಿತ್ರದಲ್ಲಿ ತಾವಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಈ ಚಿತ್ರದಲ್ಲಿ ಟ್ರ್ಯಾಪಿಜ್ ಕಲಾವಿದೆಯಾಗಿ (ಸರ್ಕಸ್ ಆಟದ ಮಾದರಿಯಲ್ಲಿ ಹಗ್ಗದಿಂದ  ಹಗ್ಗಕ್ಕೆ ಜಿಗಿಯುವ ಆಟ) ತಾವು ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ತರಬೇತಿ ಪಡೆಯುತ್ತಿದ್ದೇನೆ ಎಂದಷ್ಟೇ ದಿಶಾ ಹೇಳಿಕೊಂಡಿದ್ದು, ಈಗಾಗಲೇ ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ಕುತೂಹಲ ಕೆರಳಿದೆ.

ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಮುಖ್ಯ ಪಾತ್ರದಲ್ಲಿರುವ ‘ಭಾರತ್’ ಸಿನಿಮಾ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

‘ಭಾರತ್’ ದಕ್ಷಿಣ ಕೊರಿಯಾದ ‘ಒಡೆ ಟು ಮೈ ಫಾದರ್’ ಸಿನಿಮಾದ ರಿಮೇಕ್ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !