ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ಪಟಾನಿ ‘ಪತಾ ನಹಿ’!

Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

‘ಕಾಪಿ–ಪೇಸ್ಟ್‌ ಹೇಗೆ ಮಾಡಬೇಕು ಎಂದು ಈ ದಿಶಾಗೆ ‘ಪತಾ ನಹಿ’ (ಗೊತ್ತಿಲ್ಲ)’.

‘ಯಾವುದೇ Textನ್ನು ನಕಲು ಮಾಡಲು Ctrl C+Ctrl V ಕಮಾಂಡ್‌ಗಳು ಗೊತ್ತಿದ್ದರೆ ಸಾಲದು, ಬುದ್ಧಿಯೂ ಬೇಕು’

‘ಗೋಲ್ಡನ್‌ ರೂಲ್‌: ಕಾಪಿ ಪೇಸ್ಟ್‌ ಮಾಡುವ ಮೊದಲು ಎರಡೆರಡು ಸಲ ಓದ್ಕೊಳ್ಳಿ’...

– ಬಾಲಿವುಡ್‌ ನಟಿ ದಿಶಾ ಪಟಾನಿ ಅವಸರದಲ್ಲಿ ಮಾಡಿದ ಒಂದು ತಪ್ಪಿಗೆ ಟ್ರೋಲ್‌ ಆಗುತ್ತಿರುವ ರೀತಿಯಿದು!

ಯಾಕೆ ಅಂತೀರಾ? ಆಗಿದ್ದಿಷ್ಟು: ಇನ್‌ಸ್ಟಾಗ್ರಾಂನ ಯಾವುದೋ ಪೋಸ್ಟ್‌ನಲ್ಲಿ ಬಳಕೆಯಾದ ಸಾಲುಗಳನ್ನು ಯಥಾವತ್‌ ದಿಶಾ ನಕಲು ಮಾಡಿ ತಮ್ಮದೊಂದು ಫೋಟೊಗೆ ಚಿತ್ರಶೀರ್ಷಿಕೆಯಾಗಿ ಬಳಸಿಕೊಂಡಿದ್ದರು. ಅರ್ಥಾತ್‌, ಕಾಪಿ–ಪೇಸ್ಟ್‌ ಮಾಡಿಕೊಂಡಿದ್ದರು. ಅಸಲಿಗೆ ಅದುಮೊಬೈಲ್‌ ಫೋನ್‌ನ ಜಾಹೀರಾತಿನ ಒಕ್ಕಣೆಯಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ದಿಶಾ, ಈ ಫೋಟೊ ಮತ್ತು ಅಡಿಟಿಪ್ಪಣಿ ಹಾಕಿದ ಕೆಲವೇ ಕ್ಷಣಗಳಲ್ಲಿ ಟೀಕೆಗಳ ಸುರಿಮಳೆ ಶುರುವಾಯಿತು.

ತಾವು ಮಾಡಿದ ಪ್ರಮಾದ ಗಮನಕ್ಕೆ ಬರುತ್ತಲೇ ದಿಶಾ ತಮ್ಮ ಪೋಸ್ಟ್‌ನ್ನು ಅಳಿಸಿಹಾಕಿದ್ದಾರೆ. ಆದರೂ ಹಳೆಯ ಪೋಸ್ಟ್‌ ಟ್ರೋಲ್‌ ಆಗುತ್ತಲೇ ಇದೆ. ತಾವು ಯೋಗಾಸನ ಮಾಡುತ್ತಿರುವ ಫೋಟೊಗೆ ದಿಶಾ ತಪ್ಪು ಚಿತ್ರಶೀರ್ಷಿಕೆ ಹಾಕಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT