ಶುಕ್ರವಾರ, ಫೆಬ್ರವರಿ 26, 2021
28 °C

‘ಪುಷ್ಪ’ ವಿಶೇಷ ಹಾಡಿಗೆ ದಿಶಾ ಪಟಾನಿ ಹೆಜ್ಜೆ

ಏಜೇನ್ಸಿಸ್ Updated:

ಅಕ್ಷರ ಗಾತ್ರ : | |

ಅಲ್ಲು ಅರ್ಜುನ್‌ನ ಹೊಸ ಚಿತ್ರ ‘ಪುಷ್ಪ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ದಿಶಾ ಪಟಾನಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಂತೆ. 

‘ಅಲಾ ವೈಕುಂಠಪುರಮುಲೊ’ ಚಿತ್ರವು ಭಾರಿ ಯಶಸ್ಸು ಗಳಿಸಿದ್ದರಿಂದ ಅಲ್ಲು ಅರ್ಜುನ್‌ ಅಭಿನಯದ ಹೊಸ ಚಿತ್ರದ ಬಗ್ಗೆ ಭಾರಿ ಕುತೂಹಲ ಗರಿಗೆದರಿದೆ. ನಿರ್ದೇಶಕ ಸುಕುಮಾರ್‌, ಅಲ್ಲು ಅರ್ಜುನ್‌ ಜೊತೆಗಿನ ಹೊಸ ಚಿತ್ರ ‘ಪುಷ್ಪ’ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿ ದಿಶಾ ಪಟಾನಿ ನಟಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಅಲ್ಲು ಅರ್ಜುನ್‌ ಜೊತೆಗೆ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಲು ಚಿತ್ರತಂಡ, ದಿಶಾ ಪಟಾನಿ ಅವರ ಜೊತೆ ಮಾತುಕತೆ ನಡೆಸಿದೆ. ಆದರೆ ‘ಭಾಗಿ 3’ ನಟಿ ಈ ಆಫರ್‌ನ್ನು ಒಪ್ಪಿಕೊಳ್ಳುತ್ತಾರಾ ಎಂಬುದು ಲಾಕ್‌ಡೌನ್‌ ಬಳಿಕ ಗೊತ್ತಾಗಲಿದೆ. 

ಸದ್ಯ ಈ ಚಿತ್ರದ ಕೆಲಸಗಳು ಸ್ಥಗಿತಗೊಂಡಿವೆ. ಲಾಕ್‌ಡೌನ್‌ ಮುಗಿದ ನಂತರ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ.

 
 
 
 

 
 
 
 
 
 
 
 
 

Do you love me🐰

A post shared by disha patani (paatni) (@dishapatani) on

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು