ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ಮಾಡಿದ್ದೊಂದು ಆಗಿದ್ದೊಂದು

Last Updated 9 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಕಂಪನಿಯೊಂದರ ಜಾಹೀರಾತಿಗಾಗಿ ತೆಗೆಸಿಕೊಂಡಿದ್ದ ಫೋಟೊವನ್ನು ತನ್ನ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಬಾಲಿವುಡ್ ನಟಿ ದಿಶಾ ಪಠಾನಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಅರೆಬರೆ ಲೆಹೆಂಗಾ ತೊಟ್ಟ ಫೋಟೊವನ್ನು ದಿಶಾ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ನೆಟ್ಟಿಗರು, ‘ಹಬ್ಬದ ಗಡಿಬಿಡಿಯಲ್ಲಿ ದಿಶಾ ಪೂರ್ತಿಯಾಗಿ ಬಟ್ಟೆ ತೊಡುವುದನ್ನೇ ಮರೆತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಫೋಟೊದಲ್ಲಿ, ದಿಶಾ ಕೈಯಲ್ಲಿ ಹಣತೆ ಹಿಡಿದು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಅದನ್ನು ಅಪಾರ್ಥ ಮಾಡಿಕೊಂಡ ಕೆಲವರು, ‘ಈ ರೀತಿಯ ಬಟ್ಟೆ ಹಾಕಿಕೊಂಡು ಯಾರಾದರೂ ಹಬ್ಬ ಆಚರಿಸುತ್ತಾರೆಯೇ ಮತ್ತು ಯಾರಿಗಾದರೂ ಶುಭಕೋರುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ‘ಹಬ್ಬದ ವೇಳೆಯಾದರೂ ಸಭ್ಯ ರೀತಿಯ ಬಟ್ಟೆಗಳನ್ನು ತೊಡಬಾರದೇ, ದೀಪಾವಳಿ ವೇಳೆ ನಿಮ್ಮ ಒಳ ಉಡುಪನ್ನು ಪ್ರದರ್ಶಿಸಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ.

18 ಲಕ್ಷಕ್ಕೂ ಅಧಿಕ ಮಂದಿ ಆ ಫೋಟೊವನ್ನು ವೀಕ್ಷಿಸಿದ್ದು, ಕಾಮೆಂಟ್ ಮಾಡಿದ ಬಹುತೇಕರು ದಿಶಾ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ದಿಶಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT