ಮುಂಬೈ; ಹಿಂದಿ ‘ಬಿಗ್‌ಬಾಸ್ ಒಟಿಟಿ ಸೀಸನ್ 2‘ರ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್, ಅವರ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಲ್ಮಾನ್ ಖಾನ್, ಬಿಗ್‌ಬಾಸ್‌ನಲ್ಲಿ ಯಾರಾದರೂ ಶೋ ಮುಖ್ಯಸ್ಥರಿಗೆ ಅಥವಾ ಶೋಗಾಗಲಿ ಅಥವಾ ಇತರೆ ಸ್ಪರ್ಧಿಗಳೊಂದಿಗೆ ಅಗೌರವದಿಂದ ನಡೆದುಕೊಳ್ಳುವುದು, ನಿಂದಿಸುವುದು ಸೇರಿದಂತೆ ಅಸಭ್ಯ ವರ್ತನೆ ತೋರಿದರೆ ನಾನು ಸಹಿಸುವುದಿಲ್ಲ. ಈ ರೀತಿಯ ವರ್ತನೆಗಳು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.
ವಾರಾಂತ್ಯದ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುವ ಸಲ್ಮಾನ್, ಸ್ಪರ್ಧಿಗಳ ಆಟ, ಇತರರ ಸ್ಪರ್ಧಿಗಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ, ಜನರ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸುವ ಅವರು ತಪ್ಪು ಎನ್ನುವ ವಿಷಯಗಳ ಕುರಿತು ಹಿಂಜರಿಕೆ ಇಲ್ಲದೆ ಮಾತನಾಡುತ್ತಾರೆ ಹಾಗೂ ಅದಕ್ಕೆ ಹೊಣೆಗಾರರು ಅವರೇ ಎಂದು ತಿಳಿಸಿ ಹೇಳುತ್ತಾರೆ ಎಂದು ಬಿಗ್‌ಬಾಸ್ ಒಟಿಟಿ ತಂಡ ತಿಳಿಸಿದೆ.
ಸಲ್ಮಾನ್ ಖಾನ್ ಅವರು ಮುಂದಿನ ಚಿತ್ರ ‘ಟೈಗರ್ 3‘ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.