ಮಂಜುನಾಥನ ಗೆಳೆಯರ ವೃತ್ತಾಂತ

7

ಮಂಜುನಾಥನ ಗೆಳೆಯರ ವೃತ್ತಾಂತ

Published:
Updated:
Deccan Herald

ಚಂದನವನ ಪ್ರವೇಶಿಸುತ್ತಿರುವ ಹೊಸಬರ ಸಂಖ್ಯೆ ಹೆಚ್ಚಿದೆ. ವಿಭಿನ್ನ ಶೀರ್ಷಿಕೆಗಳ ಮೂಲಕವೂ ಪ್ರೇಕ್ಷಕರ ಮನಸೆಳೆಯುವಲ್ಲಿ ಮುಂದಿದ್ದಾರೆ. ‘ದಿವಂಗತ ಮಂಜುನಾಥನ ಗೆಳೆಯರು’ ಚಿತ್ರ ಇದಕ್ಕೊಂದು ನಿದರ್ಶನ.

ಪ್ರಾಣಸ್ನೇಹಿತನ ನಿಗೂಢ ಕೊಲೆಯಾಗುತ್ತದೆ. ಆತನ ಅಂತ್ಯಕ್ರಿಯೆ ಐವರು ಸ್ನೇಹಿತರು ಬರುತ್ತಾರೆ. ಎಲ್ಲರೂ ಎಂಜಿನಿಯರಿಂಗ್‌ ಪದವೀಧರರು. ಹಲವು ವರ್ಷದ ಬಳಿಕ ಒಂದೆಡೆ ಸೇರಿದಾಗ ಒಬ್ಬೊಬ್ಬರ ಕಥೆ ತೆರೆದುಕೊಳ್ಳುತ್ತದೆಯಂತೆ. ಅರುಣ್‌ ಎನ್‌.ಡಿ. ಈ ಚಿತ್ರದ ನಿರ್ದೇಶಕ. ಚಿತ್ರಕ್ಕೆ ಅವರೇ ಬಂಡವಾಳ ಕೂಡ ಹೂಡಿದ್ದಾರೆ.

‘ಪ್ರೀತಿ, ಸಸ್ಪೆನ್ಸ್‌, ಥ್ರಿಲ್ಲರ್‌, ಕಾಮಿಡಿಯೂ ಚಿತ್ರದಲ್ಲಿದೆ. ಹಲವು ವರ್ಷದ ನಂತರ ಸ್ನೇಹಿತರು ಪೊಲೀಸ್‌ ಠಾಣೆಯಲ್ಲಿ ಭೇಟಿಯಾದಾಗ ನಡೆಯುವ ಕಥೆ ಇದು. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ ಎಂಬ ನಂಬಿಕೆಯಿದೆ’ ಎಂದರು.

ಮಹಾರಾಷ್ಟ್ರದ ಮೂಲದ ಕಿರುತೆರೆ ನಟಿ ಶೀತಲ್‌ ಪಾಂಡ್ಯ ಈ ಚಿತ್ರದ ನಾಯಕಿ. ಸಚಿನ್‌ ನಾಯಕ ನಟನಾಗಿ ನಟಿಸಿದ್ದಾರೆ. ರುದ್ರ ಪ್ರಯಾಗ್, ಶಂಕರಮೂರ್ತಿ, ನವೀನ್‌, ರವಿ ಪೂಜಾರಿ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೃಶ್ಯಗಳು ಸಹಜವಾಗಿ ಮೂಡಿಬರಲು ಚಿತ್ರತಂಡ ಸಾಕಷ್ಟು ಶ್ರಮಪಟ್ಟಿದೆಯಂತೆ. ಕೆ.ಆರ್‌. ಮಾರ್ಕೆಟ್‌ನಲ್ಲಿ ನಡೆದ ಕರಗ ಉತ್ಸವದ ವೇಳೆ ಜನರ ಮಧ್ಯೆ ಕಲಾವಿದರು ಕಾಣೆಯಾಗಿ ಪತ್ತೆಹಚ್ಚುವುದಕ್ಕೆ ಹರಸಾಹಸಪಡಬೇಕಾಯಿತು. ಎಲ್ಲವನ್ನೂ ನಿಭಾಯಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿತು.

ಎಚ್.ವೈ. ವಿನಯ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಪೂರ್ಣ ಬೈಕಾಡಿ ಮತ್ತು ಮೊಹಮದ್‌ ಆಮಿನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಮುಂದಿನ ವಾರ ಚಿತ್ರ ತೆರೆಕಾಣಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !