ಶುಕ್ರವಾರ, ಅಕ್ಟೋಬರ್ 30, 2020
27 °C

ಗಾಯಕ ಎಸ್‌ಪಿಬಿ ಕನ್ನಡ ಕಲಿತಿದ್ದು ಹೇಗೆ ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ತೆಲುಗು ಮೂಲದ ಅವರು ಕನ್ನಡ ಕಲಿತ ಹಿಂದೆಯೂ ಕುತೂಹಲದ ಸಂಗತಿಯೊಂದಿದೆ.

ಅದು 1975ರ ಬೆಂಗಳೂರು ಗಣೇಶ ಉತ್ಸವದ ಸಂದರ್ಭ. ಅಲ್ಲಿಯವರೆಗೂ ಎಸ್‌ಪಿಬಿ ಅವರು ತಮಿಳು, ತೆಲುಗು ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದರಂತೆ.

ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಆ ವರ್ಷದ ಕಾರ್ಯಕ್ರಮ ಆಯೋಜನೆಯಾಗಿತ್ತು. ‘ನಾನು ಇನ್ನು ಮುಂದೆ ಕನ್ನಡದಲ್ಲಿಯೇ‌ ಮಾತನಾಡುತ್ತೇನೆ’ ಎಂದು ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ವೇದಿಕೆ ಮೇಲೆಯೇ ಭರವಸೆ ನೀಡಿದರಂತೆ. ಮರುವರ್ಷ ಕನ್ನಡ‌‌ ಕಲಿತು ಅಭಿಮಾನಿಗಳಿಗೆ‌ ನೀಡಿದ್ದ‌ ಮಾತನ್ನು‌ ಉಳಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಕನ್ನಡದಲ್ಲಿಯೇ ಅವರು ‘ಎದೆತುಂಬಿ ಹಾಡುವೆನು’ ರಿಯಾಲಿಟಿ ಶೋನ ಸರಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಶಸ್ತಿಗಾಗಿ ಮೂರು ದಶಕಗಳ ಕಾಯಬೇಕಾಯ್ತು...

‘ನಕ್ಕರೆ ಅದೇ ಸ್ವರ್ಗ’ ಚಿತ್ರದ ‘ಕನಸಿದೋ ಮನಸಿದೋ’ ಹಾಡಿನ ಮೂಲಕ ಚಂದನವನದಲ್ಲಿ ಗಾಯನ ಆರಂಭಿಸಿದ ಅವರು ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪಡೆಯಲು ಮೂರು ದಶಕ ಕಾಯಬೇಕಾಯಿತು.

ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ಬಂದಿದ್ದು ‘ಓ ಮಲ್ಲಿಗೆ’ ಸಿನಿಮಾದ ‘ನೇಚರೇ ನಮ್ ಟೀಚರು...’ ಹಾಡಿಗೆ. ಇದು ತೆರೆಕಂಡಿದ್ದು 1997ರಲ್ಲಿ. ಆ ನಂತರ 2004ರಲ್ಲಿ ‘ಸೃಷ್ಟಿ’ ಹಾಗೂ 2007ರಲ್ಲಿ ‘ಸವಿ ಸವಿ ನೆನಪು’ ಸಿನಿಮಾಗಳ ಹಾಡಿಗೆ ಪ್ರಶಸ್ತಿ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು