ಬಹುತೇಕ ಹೊಸಬರಿಂದಲೇ ಕೂಡಿರುವ ‘ದೊಡ್ಮನ್ಸ’ ಚಿತ್ರದ ಪ್ರಣಯ ಗೀತೆಯೊಂದು ಇತ್ತೀಚೆಗೆ ಬಿಡುಗಡೆಗೊಂಡಿದೆ. ವಿಭಿನ್ನ ಪ್ರೇಮಕಥೆಯನ್ನು ಹೊಂದಿರುವ ಚಿತ್ರಕ್ಕೆ ಶರತ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಚಿತ್ರದ ಶೀರ್ಷಿಕೆಯಲ್ಲಿಯೇ ಸೆಳೆತವಿದೆ. ದುಡ್ಡಿದ್ದವರೆಲ್ಲ ದೊಡ್ಡವರಲ್ಲ, ಒಳ್ಳೆಯ ಮನಸು ಹೊಂದಿರುವವರು ದೊಡ್ಡ ಮನುಷ್ಯರು ಎಂಬ ಸಂದೇಶ ಸಾರುವ ಚಿತ್ರವಿದು. ಆಟೋ ಚಾಲಕನೊಬ್ಬನ ಹೇಗೆ ದೊಡ್ಡ ವ್ಯಕ್ತಿಯಾಗುತ್ತಾನೆ ಎಂಬ ಕಥೆಯಿದೆ. ಆತನ ಪ್ರೇಮಕಥೆಯೂ ಬರುತ್ತದೆ. ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಎಂಟು ಜಿಲ್ಲೆಗಳಲ್ಲಿ ಆಟೋ ಚಾಲಕರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲು ಆಲೋಚಿಸಿದ್ದೇವೆ. ಇದರ ಜತೆಗೆ ಲಕ್ಕಿ ಡಿಪ್ ನಡೆಸಿ, ಓರ್ವ ಚಾಲಕನಿಗೆ ಒಂದು ಆಟೋ ನೀಡುವ ಯೋಚನೆಯೂ ಇದೆ’ ಎಂದರು ನಿರ್ದೇಶಕ.

ರೇಷ್ಮಾ, ಶಿಲ್ಪಾ ನಾಯಕಿಯರು. ಬಲ ರಾಜವಾಡಿ, ಹುಲಿ ಕಾರ್ತಿಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶ್ರೀಧರ ಕಶ್ಯಪ್ ಮತ್ತು ಅಲೆಕ್ಸ್ ಸಂಗೀತ ಸಂಯೋಜಿಸಿದ್ದಾರೆ. ಆನಂದ ಇಳಯರಾಜ ಛಾಯಾಚಿತ್ರಗ್ರಹಣ, ವೇದಿಕ್ ಸಂಕಲನ ಚಿತ್ರಕ್ಕಿದೆ. ‘ವೇದಿಕ್ ಕಾಸ್ಮೋಸ್’ ಬ್ಯಾನರಿನಲ್ಲಿ ವೇದಿಕ್ ವೀರ್ ಬಂಡವಾಳ ಹೂಡಿದ್ದು, ಬೆಂಗಳೂರು, ಅಹಮದಾಬಾದ್ ಸುತ್ತಮುತ್ತ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.