ಮಂಗಳವಾರ, ಜನವರಿ 21, 2020
23 °C

ತೆರೆಗೆ ಡು ಲಿಟಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯುನಿವರ್ಸಲ್‌ ಪಿಕ್ಚರ್ಸ್‌ ನಿರ್ಮಾಣದ ‘ಡು ಲಿಟಲ್‌’ ಸಿನಿಮಾವು ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಇದು‘ಡು ಲಿಟಲ್‌’ ಸರಣಿಯ ಐದನೇ ಚಿತ್ರವಾಗಿದ್ದು ಸಾಹಸಮಯ ಕಾಲ್ಪನಿಕ ಕತೆ ಹೊಂದಿದೆ.

ಪ್ರತಿ ಮನುಷ್ಯನಲ್ಲೂ ವಿಶೇಷ ಪ್ರತಿಭೆಯಿರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ‘ಡು ಲಿಟಲ್‌’ ಸಿನಿಮಾದ ಕತೆಯೂ ಇದನ್ನೇ ಒಳಗೊಂಡಿದೆ. ಇಲ್ಲಿ ಡಾಕ್ಟರ್‌ ಡು ಲಿಟಲ್‌ಗೆ ಪ್ರಾಣಿಗಳ ಜೊತೆ ಮಾತನಾಡುವ ವಿಶೇಷ ಪ್ರತಿಭೆಯಿರುತ್ತದೆ. ಡಾಕ್ಟರ್‌ ಡು ಲಿಟಲ್‌ ಪಾತ್ರದಲ್ಲಿ ನಟಿಸಿರುವ ಹಾಲಿವುಡ್‌ ನಟ ರಾಬರ್ಟ್‌ ಡೌನಿ ಜ್ಯೂನಿಯರ್‌ ಹಾಸ್ಯದ ಮೂಲಕ ಮಕ್ಕಳಿಗೆ ಕಚಗುಳಿ ಇಡುತ್ತಾನೆ.  

ಪತ್ನಿಯನ್ನು ಕಳೆದುಕೊಂಡ ಡಾಕ್ಟರ್‌ ಡು ಲಿಟಲ್‌ ಪ್ರಾಣಿಗಳ ಜೊತೆಯೇ ಹೆಚ್ಚು ಕಾಲ ಕಳೆಯುತ್ತಿರುತ್ತಾನೆ. ಇಂಗ್ಲೆಂಡ್‌ನಲ್ಲಿ ಕಿರಿಯ ರಾಣಿ ಜೆಸ್ಸಿ ಬಕ್ಲಿ ಅನಾರೋಗ್ಯಕ್ಕೀಡಾಗುತ್ತಾಳೆ. ಆಕೆಯನ್ನು ಗುಣಪಡಿಸುವ ಜವಾಬ್ದಾರಿ ‘ಡಾಕ್ಟರ್‌ ಡು’ ಹೆಗಲೇರುತ್ತದೆ. ಔಷಧಿಯನ್ನು ಹುಡುಕಿಕೊಂಡು ಡಾಕ್ಟರ್‌ ಏಕಾಂಗಿಯಾಗಿ ನಿಗೂಢ ದ್ವೀಪದತ್ತ  ಪ್ರಯಾಣ ಹೊರಡುತ್ತಾನೆ. ಈ ಪ್ರಯಾಣದಲ್ಲಿ ಆತ ಗೊರಿಲ್ಲಾ, ಬಾತುಕೋಳಿ, ಆಸ್ಟ್ರಿಚ್‌ ಪಕ್ಷಿ, ಹಿಮಕರಡಿ, ಗಿಳಿಯನ್ನು ಭೇಟಿ ಮಾಡುತ್ತಾನೆ. ದ್ವೀಪ ಶೋಧಿಸುವ ಪ್ರಯಾಣ ಎಷ್ಟು ಸಾಹಸಮಯ ಮತ್ತು ಮೋಜು, ಮಸ್ತಿಗಳಿಂದ ಕೂಡಿತ್ತು ಎನ್ನುವುದನ್ನುಆಕರ್ಷಕವಾಗಿ ಕಟ್ಟಿಕೊಡಲಾಗಿದೆ. ಹೆಜ್ಜೆ, ಹೆಜ್ಜೆಗೂ ಎದುರಾಗುವ ಸವಾಲುಗಳನ್ನು ಡಾ.ಡು ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಚಿತ್ರದ ತಿರುಳು.   

ಸ್ಪೀಫನ್‌ ಗ್ಯಾಗನ್ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಡ್ಯಾನ್ನಿ ಎಲ್ಫ್‌ಮ್ಯಾನ್‌ ಸಂಗೀತ ನೀಡಿದ್ದಾರೆ. ಗುಯ್‌ಲ್ಲೆರ್ಮೊ ನರಾವವೊ ಕ್ಯಾಮೆರಾ ಕೈಚಳಕ ಮನಮುಟ್ಟುತ್ತದೆ.

ಪ್ರತಿಕ್ರಿಯಿಸಿ (+)