ಮಂಗಳವಾರ, ಮೇ 24, 2022
23 °C

ತನುಜಾ ಕಥೆಯ ಸಿನಿಮಾದಲ್ಲಿ ಸಚಿವ ಡಾ.ಕೆ.ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾದಲ್ಲಿ ನಟಿಸ್ತಾರಾ ಸಚಿವ ಕೆ. ಸುಧಾಕರ್‌?

ಹೀಗೊಂದು ಸುದ್ದಿಗೆ ಹೌದು ಎನ್ನುತ್ತವೆ ಸುಧಾಕರ್‌ ಅವರ ಆಪ್ತ ಬಳಗ.

ಇದು ತನುಜಾ ಅವರ ಕಥೆ. ತನುಜಾ ಶಿವಮೊಗ್ಗದ ಹುಡುಗಿ. ಕೊರೊನಾ ಅವಧಿಯಲ್ಲಿ (ಸೆ. 13, 2020) ತನುಜಾ ಅವರಿಗೆ ನೀಟ್‌ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವರ ಮನೆಯ ಪ್ರದೇಶವನ್ನು ಕಂಟೈನ್‌ಮೆಂಟ್‌ ಪ್ರದೇಶ ಎಂದು ಗುರುತಿಸಲಾಗಿತ್ತು. ಹಾಗಾಗಿ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ನೀಟ್‌ ಪರೀಕ್ಷೆಯನ್ನು ಎರಡನೇ ಬಾರಿ ಆಯೋಜಿಸಿದಾಗ ತನುಜಾ ಅವರಿಗೆ ಇಂಟರ್‌ನೆಟ್‌ ಸಮಸ್ಯೆಯಿಂದ ದಾಖಲೆಗಳನ್ನು ಕಳುಹಿಸಲೂ ಆಗಿರಲಿಲ್ಲ. ಈ ಸಮಸ್ಯೆಯನ್ನು ತನುಜಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಆಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಡಾ.ಕೆ.ಸುಧಾಕರ್‌ ಅವರು ಪರೀಕ್ಷಾ ಪ್ರಾಧಿಕಾರದ ತಾಂತ್ರಿಕ ಅಧಿಕಾರಿಗಳೊಂದಿಗೆ ಮಾತನಾಡಿ, ನೀಟ್‌ ಪರೀಕ್ಷೆಗೆ ಅವಕಾಶ ಸಿಗಲು ಸಹಕರಿಸಿದ್ದರು. ತನುಜಾ ನೀಟ್‌ ಪರೀಕ್ಷೆ ಬರೆದು ಎಂಬಿಬಿಎಸ್‌ ಸೀಟು ಗಿಟ್ಟಿಸಿಕೊಂಡಿದ್ದರು.

ಈ ಕಥೆಯನ್ನಿಟ್ಟುಕೊಂಡು ಚಿತ್ರ ನಿರ್ಮಿಸಲು ತಂಡವೊಂದು ಮುಂದಾಗಿದೆಯಂತೆ. ಅದಕ್ಕೆ ಸಚಿವ ಸುಧಾಕರ್‌ ಒಪ್ಪಿಗೆ ಸೂಚಿಸಿದ್ದಾರೆ ಎಂದೂ ಅವರ ಆಪ್ತ ಮೂಲಗಳು ಹೇಳಿವೆ.

ಸುಧಾಕರ್‌ ಅವರೂ ಒಪ್ಪಿದ್ದಾರೆ. ಬಹುಶಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಪಾಲ್ಗೊಳ್ಳಬಹುದು ಎಂದು ಇದೇ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು