ಮೋಹನ್ ಲಾಲ್ ನಟಿಸಿ, ಜಿತು ಜೋಸೆಫ್ ನಿರ್ದೇಶಿಸಿರುವ ಬಹುನಿರೀಕ್ಷಿತ ‘ದೃಶ್ಯಂ 3’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಮೂಲ ಸಿನಿಮಾ ‘ದೃಶ್ಯಂ’ನಂತೆ ಇಲ್ಲಿಯೂ ಜಾರ್ಜ್ಕುಟ್ಟಿ ಕಥೆಯೇ ಮುಂದುವರಿದಿದೆ ಎಂಬುದು ಟ್ರೇಲರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

2015ರಲ್ಲಿ ‘ದೃಶ್ಯಂ’ ಚಿತ್ರ ತೆರೆಕಂಡು, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈ ಸಿನಿಮಾದ ಎರಡನೇ ಭಾಗ 2022ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಮೂರನೇ ಭಾಗ ಸಿದ್ಧಗೊಂಡಿದ್ದು, ಮೇ 21ರಂದು ತೆರೆ ಕಾಣಲಿದೆ.

ಮೂಲ ಕಥೆಯ ನಾಯಕ ಜಾರ್ಜ್ಕುಟ್ಟಿ, ತನ್ನ ಹಿಂದಿನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ. ತನ್ನ ಮಕ್ಕಳು ತನ್ನನ್ನು ಓರ್ವ ಅಪರಾಧಿ ಎಂದು ಭಾವಿಸುತ್ತಿರಬಹುದೇ ಎಂಬ ಆತಂಕ ಅವನನ್ನು ಕಾಡುತ್ತಿದೆ. ಪೊಲೀಸರಿಂದ ತನ್ನ ಕುಟುಂಬವನ್ನು ರಕ್ಷಿಸಲು ಆತ ಈ ಸಲ ಯಾವ ರೀತಿಯ ಹೊಸ ತಂತ್ರಗಳನ್ನು ಹೆಣೆಯುತ್ತಾನೆ ಎಂಬುದೇ ಒಟ್ಟಾರೆ ಕಥೆ ಎಂಬುದು ಟ್ರೇಲರ್ನಿಂದ ಗೊತ್ತಾಗುತ್ತಿದೆ.

ಮೋಹನ್ ಲಾಲ್ ಜಾರ್ಜ್ಕುಟ್ಟಿಯಾಗಿ ಕಾಣಿಸಿಕೊಂಡಿದ್ದಾರೆ. ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಲ್ ಜಾನ್ಸನ್ ಸಂಗೀತ, ಸತೀಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-1776783612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.