ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರವರ್ತಿಯ ದ್ರೋಣಾಸ್ತ್ರ

Last Updated 5 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟನೆಯ ಮತ್ತು ಪ್ರಮೋದ್‌ ಚಕ್ರವರ್ತಿ ನಿರ್ದೇಶನದ ‘ದ್ರೋಣ’ ಚಿತ್ರ ಇದೇ ಶುಕ್ರವಾರ (ಮಾ.6) ತೆರೆಕಾಣುತ್ತಿದೆ. ವಿಷಯ ಪ್ರಧಾನ ಮತ್ತು ಸಂಪೂರ್ಣ ಮನರಂಜನೆಯುಳ್ಳ ಕಮರ್ಷಿಯಲ್‌ ಸಿನಿಮಾವನ್ನು ಪ್ರೇಕ್ಷಕರಿಗೆ ಭೂರಿ ಭೋಜನದಂತೆ ಉಣಬಡಿಸುವ ಖುಷಿಯಲ್ಲಿರುವ ಪ್ರಮೋದ್‌ ಚಕ್ರವರ್ತಿ ‘ದ್ರೋಣ’ ಚಿತ್ರದ ಕುರಿತು ಹಲವು ಮಾಹಿತಿಗಳನ್ನು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

* ‘ದ್ರೋಣ’ ಕಥೆಯಹಿಂದಿನ ಕಹಾನಿ ಹೇಳಿ...

ಹರಿಹರ ಎನ್ನುವ ಸಿನಿಮಾ‌ ಮಾಡಲು ಸ್ಕ್ರಿಪ್ಟ್ ರೆಡಿ ಮಾಡಿಕೊಂಡು‌ ಶಿವಣ್ಣ ಬಳಿ ಹೋದಾಗ, ತಮಿಳಿನ ಸಾಟೆ (ಚಾವಟಿ) ಸಿನಿಮಾ ಉಲ್ಲೇಖಿಸಿ ಅಂತಹ ಕಂಟೆಂಟ್ ಇರುವ ಸಿನಿಮಾ ಮಾಡುವ ಸಲಹೆ ಕೊಟ್ಟರು. ನಮ್ಮಿಬ್ಬರ ಆಸಕ್ತಿ ಮತ್ತುಚರ್ಚೆಯ ನಂತರ ರೂಪುಗೊಂಡಿದ್ದೇ ಈ ದ್ರೋಣ ಎಂದು ಅವರು ಚಿತ್ರದ ಹಿಂದಿನ‌ ಕಹಾನಿ‌ ಬಿಚ್ಚಿಟ್ಟರು.

* ಚಿತ್ರದ ಕಥಾವಸ್ತು ಯಾವುದರ ಸುತ್ತ ಹೆಣೆದಿದ್ದೀರಿ?

ಇದು ಸರ್ಕಾರಿ ಶಾಲೆಯ ಸಮಸ್ಯೆ ಕೇಂದ್ರೀಕರಿಸಿದೆ. ಸರ್ಕಾರ ಕಲ್ಪಿಸಿರುವ ಸೌಲಭ್ಯಗಳನ್ನು ಸರಿಯಾದ ಹಾದಿಯಲ್ಲಿ ಬಳಸಿದರೆ ಹೇಗಿರುತ್ತದೆ ಮತ್ತು ಬಳಸದೆ ಇರುವ ಕಡೆ ಹೇಗಿರುತ್ತದೆ ಎನ್ನುವುದನ್ನು ಚಿತ್ರ ತೆರೆದಿಡಲಿದೆ. ಸರ್ಕಾರಿ ವಿರೋಧಿ ಧೋರಣೆಯ ಮ್ಯಾಟರ್ ಅಂತೂಇದರಲ್ಲಿ ಖಂಡಿತಾಇಲ್ಲ.

* ಶಿಕ್ಷಣದ ಕ್ಷೇತ್ರದ ಯಾವ ಸಮಸ್ಯೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿದ್ದೀರಿ?

ಶಾಲೆ‌‌ ಎಂದ ಮೇಲೆ ನೂರೆಂಟು ಸಮಸ್ಯೆಗಳಿರುತ್ತವೆ.ಡೊನೆಷನ್ ಹಾವಳಿ ಇತ್ಯಾದಿ ಸಮಸ್ಯೆಗಳನ್ನು ನಾನು ಟಚ್ ಮಾಡಿಲ್ಲ. ಆದರೆ, ಒಬ್ಬ ಸಮರ್ಥ ಶಿಕ್ಷಕ ಒಂದುಶಾಲೆಗೆ ವರ್ಗವಾಗಿಯೋ, ನೇಮಕವಾಗಿಯೋಬಂದರೆ ಅಲ್ಲಿದ್ದ ಅವ್ಯವಸ್ಥೆ ಹೇಗೆ ಬದಲಾಯಿಸಬಹುದು ಎನ್ನುವುದನ್ನು ದ್ರೋಣನ ಮೂಲಕ ಹೇಳಿದ್ದೇವೆ.ಈ ಸಿನಿಮಾ ನೋಡಿದ ಮೇಲೆ ಪ್ರತಿ ಪ್ರೇಕ್ಷಕನು ಪೋಷಕನಾಗಿ ತಮ್ಮ‌ಮಕ್ಕಳಿಗೆ, ತಮ್ಮ ನೆರೆಹೊರೆಯ ಶಾಲೆಗಳಿಗೆ ದ್ರೋಣನಂತಹ ಶಿಕ್ಷಕ ಬೇಕೆನ್ನುತ್ತಾರೆ.

* ಈ ಚಿತ್ರ ರೆಗ್ಯುಲರ್‌ ಫಾರ್ಮೆಟ್‌ನಿಂದ ಯಾವ ರೀತಿ ಭಿನ್ನವಾಗಿದೆ?

ಈ ಸಿನಿಮಾ ನಿಜಕ್ಕೂ ಒಂದು ರೆಗ್ಯುಲರ್ ಪಾರ್ಮೆಟ್‌ಗಿಂತ ಭಿನ್ನವಾಗಿರಲಿದೆ. ಶಿಕ್ಷಕ, ಸರ್ಕಾರಿ ಶಾಲೆ ಸಬ್ಜೆಕ್ಟ್ ಎಂದಾಕ್ಷಣ ಕೆಲವರು ಅದರಲ್ಲಿ ಇನ್ನೇನು ವಿಶೇಷ ಇರಲಿಕ್ಕೆ ಸಾಧ್ಯ ಎಂದು ಮೂಗುಮುರಿಯಬಹುದು. ಚಿತ್ರದ ಪ್ರಧಾನ ವಿಷಯಕ್ಕೆ ಎಲ್ಲೂ ಧಕ್ಕೆ ಎದುರಾಗದಂತೆ‌ ಕಮರ್ಷಿಯಲ್ ಆಯಾಮವನ್ನು ಸೇರಿಸಿದ್ದೇನೆ. ಅದು ಚಿತ್ರದಲ್ಲಿ ತುಂಬಾ ತಾಜಾತನದಿಂದ ಕಾಣಿಸಲಿದೆ.

* ಮಹಾಭಾರತದ ದ್ರೋಣನಿಗೂ ಚಿತ್ರದ ಶೀರ್ಷಿಕೆ, ಪಾತ್ರಕ್ಕು ನಂಟು ಇದೆಯಾ?

ಮಹಾಭಾರತದ ದ್ರೋಣಾಚಾರ್ಯರಿಗೂ ನಮ್ಮ ಈ ಸಿನಿಮಾದ ದ್ರೋಣ ಪಾತ್ರಕ್ಕೆ ನಂಟು ಇಲ್ಲ. ಏಕಲವ್ಯನ ವಿಚಾರದಲ್ಲಿ ಪಕ್ಷಪಾತಿಯಾಗಿದ್ದಕ್ಕೆ, ಯುದ್ಧದಲ್ಲಿ ಕೌರವರ ಪರ‌ ನಿಂತಿದ್ದಕ್ಕೆ ಮಹಾಭಾರತದ ದ್ರೋಣಾಚಾರ್ಯರನ್ನು ಕೆಲವರು ಒಪ್ಪದೇ ಇರಬಹುದು. ಆದರೆ, ಶಿಕ್ಷಣ, ಸಮಾಜದ ಪರ ನಿಲ್ಲುವನಮ್ಮ ಈ ದ್ರೋಣನನ್ನು ಎಲ್ಲರೂ ಒಪ್ಪುತ್ತಾರೆ.ದ್ರೋಣ ಎಂದರೆ ಗುರು. ಹಾಗಾಗಿ ಈ ಶೀರ್ಷಿಕೆ ಆಯ್ದುಕೊಂಡೆ.

* ಶಿವಣ್ಣನನ್ನು ಈ ಪಾತ್ರಕ್ಕೆಯಾವ ರೀತಿ ಒಗ್ಗಿಸಿದ್ದೀರಿ?

ಶಿವಣ್ಣ ಆ್ಯಕ್ಷನ್‌, ಸೆಂಟಿಮೆಂಟ್‌, ಕಾಮಿಡಿ ಸಿನಿಮಾ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಮಾತಿನ ಶೈಲಿ ಹಾಗೂ ವೇಗವನ್ನು ಅವರು ಬಹಳಷ್ಟು ಬದಲಿಸಿಕೊಂಡಿದ್ದಾರೆ.ಶಿಕ್ಷಕ ವೃತ್ತಿಯ ಪಾತ್ರಕ್ಕೆ ನ್ಯಾಯ ಒದಗಿಸಬೇಕೆಂದರೆ ಆ ಸಾಮರ್ಥ್ಯ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಅದನ್ನು ಶಿವಣ್ಣ ಈ ಚಿತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ.

ಮೊದಲ ಹತ್ತದಿನೈದು ನಿಮಿಷ ಮಾತ್ರ ನಿಮಗೆ ಶಿವಣ್ಣ ಅನಿಸಬಹುದು. ತದನಂತರ ಶಿವರಾಜ್‌ಕುಮಾರ್‌ ಕಾಣಿಸುವುದಿಲ್ಲ, ಒಬ್ಬ ಗುರು ಮಾತ್ರ ಕಾಣಿಸುತ್ತಾರೆ. ಅಷ್ಟರಮಟ್ಟಿಗೆ ಅವರನ್ನು ಈ ಪಾತ್ರಕ್ಕೆ ಒಗ್ಗಿಸಿದ್ದೇವೆ. ಪರಿಣಾಮಕಾರಿಯಾದ ಪಾತ್ರವನ್ನು ಶಿವಣ್ಣನೂ ಬಹಳ ತಣ್ಣಗೆ ನಿಭಾಯಿಸಿದ್ದಾರೆ.

* ‘ದ್ರೋಣ’ನ ಮೂಲಕ ಸಮಾಜಕ್ಕೆ ಏನು ಪಾಠ– ಸಂದೇಶ ಹೇಳಬೇಕೆಂದಿದ್ದೀರಿ?

ಮಕ್ಕಳಿಗೆ ಸ್ವಾತಂತ್ರ್ಯಸಿಕ್ಕ ತಕ್ಷಣ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ಮಕ್ಕಳ ಮೇಲೆ ನಂಬಿಕೆಯನ್ನೂ ಇಡಬೇಕು ಎಂಬ ಸಂದೇಶಗಳೂ ಇದರಲ್ಲಿವೆ.‌ ಮಕ್ಕಳಿಗೂ, ಶಿಕ್ಷಕರಿಗೂ, ಸಮಾಜಕ್ಕೂ ಇದರಲ್ಲಿ ಪಾಠವೂ ಇದೆ.

* ಚಿತ್ರದ ಮೇಲೆ ಏನು ನಿರೀಕ್ಷೆ ಇದೆ ?

ಈ ಚಿತ್ರ ಎಲ್ಲ ವಯೋಮಾನದವರನ್ನು ಖಂಡಿತಾ ತಲುಪುತ್ತದೆ. ಎಲ್ಲರನ್ನೂ ರಂಜಿಸುತ್ತದೆ.ಎಲ್ಲ ವರ್ಗದ ಪ್ರೇಕ್ಷಕರೂ ‘ದ್ರೋಣ’ನನ್ನು ಖುಷಿಯಿಂದ ಸ್ವೀಕರಿಸುವ ನಂಬಿಕೆ, ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT