ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಎಸ್‌ಎಸ್‌’ ಅಂದ್ರೇನು ಗೊತ್ತಾ?: ಚಿತ್ರದ ಶೀರ್ಷಿಕೆ, ಪೋಸ್ಟರ್‌ ಅನಾವರಣ

Last Updated 24 ಆಗಸ್ಟ್ 2021, 12:12 IST
ಅಕ್ಷರ ಗಾತ್ರ

ಇಲ್ಲೊಂದು ಹೊಸ ತಂಡದವರು ಸಿನಿಮಾಕ್ಕೆ ಹೆಸರು ಇಡುವ ಪ್ರಯುಕ್ತ ‘ಡಿಎಸ್‌ಎಸ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಡಿಎಸ್ಎಸ್‌ನ ವಿಸ್ತರಣಾ ರೂಪ ಈಗ ಗೊತ್ತಾಗಿದೆ. ಸಿನಿ ಅಭಿಮಾನಿಯೊಬ್ಬರು ಸೂಚಿಸಿದ ಹೆಸರಂತೆ.

ಚಿತ್ರ ತಂಡದ ಪ್ರಕಾರ ಡಿಎಸ್‌ಎಸ್‌ ಎಂದರೆ ‘ಧೈರ್ಯಂ ಸರ್ವತ್ರ ಸಾಧನಂ’. ಈ ಹೆಸರು ಸೂಚಿಸಿದವರು ಚಿತ್ರದುರ್ಗದ ಶಿಕ್ಷಕ ರಜನೀಕಾಂತ್‌.

ಚಿತ್ರದ ಶೀರ್ಷಿಕೆಯ ಪೋಸ್ಟರ್‌ನ್ನು ಅನಾವರಣ ಮಾಡಲಾಗಿದೆ. ‘ಜಾಯಿನ್‌ ದ ಅಡ್ವೆಂಚರ್‌’ ಅನ್ನುವುದು ಚಿತ್ರದ ಟ್ಯಾಗ್‌ಲೈನ್‌.

ಎ.ಆರ್.ಸಾಯಿರಾಂ ಅವರು ನಿರ್ದೇಶಕರು. ಎ.ಪಿ.ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಆನಂದ್‌ ಬಾಬು ಜಿ. ನಿರ್ಮಾಣ ಮಾಡುತ್ತಿದ್ದಾರೆ. ಶಿವಮೊಗ್ಗ, ಶಿರಸಿ, ಸುರಪುರ, ತುಮಕೂರು ಮತ್ತು ದೇವರಾಯನದುರ್ಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT