ಬುಧವಾರ, ಏಪ್ರಿಲ್ 21, 2021
23 °C

ಡಿಟಿಎಸ್‌ ಚಿತ್ರೀಕರಣ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿಟಿಎಸ್ (ಡೇರ್ ಟು ಸ್ಲೀಪ್) ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. 

‘100 ಕ್ರೋರ್ಸ್‌’ ಚಿತ್ರದ ನಿರ್ಮಾಪಕರೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ದೀಪಾಲ ಡಿಟಿಎಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅಭಿರಾಮ್ ಫಿಲ್ಲ ಅವರ ನಿರ್ದೇಶನವಿದೆ. ‘ಆ ದಿನಗಳು’ ಖ್ಯಾತಿಯ ಚೇತನ್‌ ಇದರಲ್ಲಿ ನಾಯಕ. ಜತೆಗೆ ತೆಲುಗಿನ ಖ್ಯಾತ ಹಾಸ್ಯ ನಟ ಸುನೀಲ್ ಕಾಣಿಸಿಕೊಳ್ಳಲಿದ್ದಾರೆ.

ಅವರು ಈ ಚಿತ್ರದಲ್ಲಿ ಖಡಕ್ ಪೊಲೀಸ್‌ ಅಧಿಕಾರಿ.ಪಕ್ಕಾ ಆ್ಯಕ್ಷನ್‌ ಚಿತ್ರವಿದು. ನಾಲ್ಕು ಸಾಹಸ ದೃಶ್ಯಗಳಿವೆ. ಸಿನಿಮಾದ ಬಹುಭಾಗ ಶೂಟಿಂಗ್‌ ದುಬೈ, ಥೈಲ್ಯಾಂಡ್‌ನಲ್ಲಿ ನಡೆದಿದೆ. ಕೆಲವು ಭಾಗ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ನಡೆದಿದೆ. ಡೋನಲ್ ಮತ್ತು ನತಾಶಾ ನಾಯಕಿಯರಾಗಿ ನಟಿಸುತ್ತಿದ್ದು, ಈಗಾಗಲೇ ಇವರೂ ಸಹ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಕಬೀರ್ ಸಿಂಗ್, ಕೃಷ್ಣ ಮುರಳಿ, ಚರಣ್, ಶಕಲಕಾ ಶಂಕರ್, ಚಿತ್ರಂ ಶ್ರೀನು, ಗೆಟಪ್ ಸೀನು, ರವಿ ವರ್ಮಾ, ರಕೇಂದು ಮೌಳಿ ತಾರಾಗಣದಲ್ಲಿದ್ದಾರೆ. ಸಾಯಿ ಕಾರ್ತಿಕ್ ಅವರ ಸಂಗೀತವೂ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು