ದುಲ್ಕರ್ ಸಲ್ಮಾನ್ ನಟನೆಯ ‘ಐ ಆ್ಯಮ್ ಗೇಮ್’ ಮಲಯಾಳ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ನಹಾಸ್ ಹಿದಾಯತ್ ನಿರ್ದೇಶನದ ಸಿನಿಮಾ ಆ.20ರಂದು ತೆರೆ ಕಾಣುವ ನಿರೀಕ್ಷೆಯಿದೆ.

‘ಕಿಂಗ್ ಆಫ್ ಕೋಥಾ’ ಸೋಲಿನ ಬಳಿಕ ದುಲ್ಕರ್ ಮಲಯಾಳ ಚಿತ್ರರಂಗದಿಂದ ದೂರ ಉಳಿದು, ಬೇರೆ ಭಾಷೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ‘ಸೀತಾ ರಾಮಂ’, ‘ಲಕ್ಕಿ ಭಾಸ್ಕರ’ ಯಶಸ್ಸಿನ ಬಳಿಕ ತೆಲುಗಿನಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ತಮಿಳಿನ ‘ಕಾಂತಾ’ ಚಿತ್ರವೂ ಹೆಚ್ಚು ಯಶಸ್ಸು ನೀಡಲಿಲ್ಲ. ಬಳಿಕ ಮಲಯಾಳದಲ್ಲಿ ‘ಲೋಕಾ ಚಾಪ್ಟರ್–1’ ಚಿತ್ರ ನಿರ್ಮಾಣ ಮಾಡಿ ವ್ಯಾಪಕ ಯಶಸ್ಸು ಕಂಡರು. ಇದೀಗ ಮತ್ತೆ ಮಲಯಾಳ ಚಿತ್ರೋದ್ಯಮಕ್ಕೆ ಮರಳಿದ್ದು, ಆ್ಯಕ್ಷನ್, ಕ್ರೀಡಾ ಕಥೆಯನ್ನು ಹೊಂದಿರುವ ‘ಐ ಆ್ಯಮ್ ಗೇಮ್’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ.

ಹಿದಾಯತ್ ‘ಆರ್ಡಿಎಕ್ಸ್’ ಚಿತ್ರದ ಯಶಸ್ಸಿನ ಬಳಿಕ ಕೈಗೆತ್ತಿಕೊಂಡಿರುವ ಚಿತ್ರವಿದು. ದುಲ್ಕರ್ ಮಾಸ್, ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರದ ಪೋಸ್ಟರ್ಗಳಿಂದ ಗೊತ್ತಾಗುತ್ತಿದೆ. ಆ್ಯಂಟೋನಿ ವರ್ಗೀಸ್, ಸಂಯುಕ್ತ ವಿಶ್ವನಾಥನ್ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-51-2131298591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.