ದುನಿಯಾ ವಿಜಯ್ ಸದ್ಯ ತಮ್ಮ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ನಿರ್ದೇಶಿಸಿದ ಎರಡು ಸಿನಿಮಾಗಳಲ್ಲಿ ಭೂಗತ ಲೋಕ, ಮಾದಕವಸ್ತು ವಿಷಯಗಳನ್ನೆತ್ತಿಕೊಂಡಿದ್ದ ಅವರು ಹೊಸ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡುವತ್ತಲೂ ಚಿತ್ತ ಹರಿಸಿದ್ದಾರೆ. ಇತ್ತೀಚೆಗೆ ‘ಸಿಟಿ ಲೈಟ್ಸ್’ ಸಿನಿಮಾದ ‘ಬಾವ ಬಾವ’ ಹಾಡು ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮ ನಿರ್ದೇಶನದ ಬಗ್ಗೆ, ಇಂದಿನ ಝೆನ್–ಜಿ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಸಿನಿ ಪ್ರಯೋಗದ ಬಗ್ಗೆ ಮಾತಿಗಿಳಿದಾಗ...

‘ಸಿನಿಮಾದ ಶೀರ್ಷಿಕೆಯ ‘ಶಬ್ದ’ ಕೇಳುಗರಿಗೆ ಇಷ್ಟವಾಗಬೇಕು. ಇವತ್ತಿನ ಪೀಳಿಗೆಗೆ (ಝೆನ್–ಜಿ) ಇಂತಹ ಶೀರ್ಷಿಕೆಗಳು ಸೆಳೆಯುತ್ತವೆ. ಇವತ್ತಿನ ಮಕ್ಕಳ ವೇಗ ತೀವ್ರತರವಾದದ್ದು. ಎಲ್ಲವನ್ನೂ ಗೂಗಲ್ನಲ್ಲೇಕೇಳಿಕೊಂಡು ಹೆಜ್ಜೆ ಇಡುವವರು. ಈ ಝೆನ್–ಜಿ ಪೀಳಿಗೆಗೆ ಏನುಹೇಳಬಹುದು ಎನ್ನುವುದು ಸದಾ ನನ್ನೊಳಗೆ ಕೊರೆಯುತ್ತಿರುತ್ತದೆ.ನನ್ನ ಸಿನಿಮಾಗಳ ‘ರ್ಯಾಪ್’ ಹಾಡುಗಳು ಇವರನ್ನೇ ಗುರಿಯಾಗಿಸಿಕೊಂಡು ಮಾಡಿರುವಂಥದ್ದು. ಈ ಝೆನ್–ಜಿ ಪೀಳಿಗೆಯನ್ನು ನೋಡಿಕೊಂಡು ಸಿನಿಮಾ ಮಾಡಬೇಕಿದೆ. ಪ್ರೇಕ್ಷಕರೇ ನಮಗೆ ದೇವರ ರೀತಿ. ಅವರು ಒಳಗೆ ಬರಬೇಕು ಎಂದರೆ ಏನಾದರೂ ಭಿನ್ನ ಕಥೆಯನ್ನು ಹೇಳಬೇಕು. ಈ ಪೀಳಿಗೆಯನ್ನು ಚಿತ್ರಮಂದಿರಗಳ ಒಳಗೆ ಹೆಜ್ಜೆ ಇಡುವಂತೆ ಮಾಡುವುದೇ ಒಂದು ಸವಾಲು. ಅವರನ್ನು ಒಳಕರೆದು ‘ಒಂದು ಕೌಟುಂಬಿಕ ಕಥೆ ಹೇಳುತ್ತೇನೆ’ ಎಂದರೆ ತಿರಸ್ಕರಿಸುತ್ತಾರೆಯೇ ಎಂಬುವುದು ಒಂದು ರೀತಿಯ ಭಯ’ ಎನ್ನುತ್ತಾರೆ ವಿಜಯ್.

‘ಹಾಡುಗಳ ವಿಷಯದಲ್ಲಿ ನನ್ನ ಅಭಿರುಚಿ ತದ್ವಿರುದ್ಧ. ನನ್ನ ಸಿನಿಮಾದೊಳಗೆ ರ್ಯಾಪ್ ಹಾಡುಗಳಿದ್ದರೂ, ನನಗೆ ಗಣೇಶ್ ಅವರ ‘ಮುಂಗಾರು ಮಳೆಯೇ..’ ರೀತಿಯ ಮೊಲೊಡಿ ಹಾಡುಗಳು ಬಹಳ ಇಷ್ಟ. ‘ಸಲಗ’ದಲ್ಲಿ ಎರಡೂ ಮಾದರಿ ಹಾಡುಗಳಿದ್ದವು. ‘ಭೀಮ’ದಲ್ಲಿ ಕಥೆಯ ವಿಷಯ ಮೊಲೊಡಿ ಹಾಡುಗಳಿಗೆ ಅವಕಾಶ ನೀಡಲಿಲ್ಲ. ‘ಸಿಟಿ ಲೈಟ್ಸ್’ನಲ್ಲಿ ಮೆಲೊಡಿ ಹಾಡುಗಳೂ ಇವೆ. ‘ಸಲಗ’ದಿಂದ ಹಿಡಿದು ‘ಸಿಟಿ ಲೈಟ್ಸ್’ವರೆಗೆ ನೈಜ ಘಟನೆ ಆಧಾರಿತ ಕಥೆಗಳನ್ನು ಮಾಡಿದ್ದೇನೆ. ಆದರೆ ಆ ಘಟನೆಗಳನ್ನು, ವ್ಯಕ್ತಿಗಳನ್ನು ನಾನು ಬಹಿರಂಗಪಡಿಸಲು ಹೋಗುವುದಿಲ್ಲ. ಬೆಂಗಳೂರನ್ನು ಕೆಲ ದಶಕಗಳಿಂದ ನೋಡಿದ್ದೇನೆ. ಈಗಾಗಲೇ ಮಾಡಿದ ಕಥೆಗಳು ಇಲ್ಲಿಯದ್ದೇ. ಇಲ್ಲಿ ಮೋಸಗಾರರು ಜಾಸ್ತಿ ಮೋಸ ಮಾಡುವುದನ್ನು ಕಲಿತಿದ್ದಾರೆ. ಅವರಿಗೇ ಈ ಕಾಲ. ಮೋಸ ಹೋಗುವವರು ಮೋಸ ಹೋಗುತ್ತಲೇ ಇದ್ದಾರೆ’ ಎಂದರು ವಿಜಯ್.

‘ನಿರ್ದೇಶನ ಎನ್ನುವುದು ಬಹಳ ಸಮಯ ತೆಗೆದುಕೊಳ್ಳುವುದು ಸಹಜ. ತಕ್ಷಣದಲ್ಲೇ ಅಡುಗೆ ಮಾಡಲು ಸಾಧ್ಯವಿಲ್ಲ. ನಾನು ಯಾವತ್ತೂ ಒತ್ತಡ ಹೇರಿಕೊಂಡು, ಕೆಲಸಗಳನ್ನು ಮೈಮೇಲೆ ಎಳೆದುಕೊಂಡು, ದುಡ್ಡಿಗೆ ದುರಾಸೆಪಟ್ಟು ಕೆಲಸ ಮಾಡಿದವನಲ್ಲ. ನೆಮ್ಮದಿ ಬೇಕು ಎಂದರೆ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು’ ಎನ್ನುತ್ತಾರೆ ವಿಜಯ್.

‘ನನಗೆ ಬೇರೆ ಮಾದರಿಯ ಕಥೆಗಳನ್ನು ಬರೆದು ನಿರ್ದೇಶಿಸಬೇಕು ಎನ್ನುವ ಹಸಿವಿದೆ. ನಾನು ಮೊದಲು ಅಂದುಕೊಂಡಿದ್ದ ಕಥೆಗಳನ್ನು ಮುಗಿಸುತ್ತಿದ್ದೇನೆ. ‘ಸಲಗ’ದಲ್ಲಿ ಭೂಗತಲೋಕದ ಕಥೆ, ‘ಭೀಮ’ದಲ್ಲಿ ಒಂದು ಸಾಮಾಜಿಕ ಸಂದೇಶ ನೀಡಿದ್ದೆ. ‘ಸಿಟಿ ಲೈಟ್ಸ್’ನಲ್ಲಿ ಒಂದು ಭಿನ್ನ ಕಥೆ ಆರಿಸಿಕೊಂಡಿದ್ದೇನೆ. ಬೆಂಗಳೂರಿನ ಕಥೆಗಳನ್ನು ಮೊದಲು ಮುಗಿಸೋಣ ಎಂದುಕೊಂಡಿದ್ದೇನೆ. ಬೇರೆ ಬೇರೆ ಜಾನರ್ನ ಸಿನಿಮಾಗಳನ್ನು ಮಾಡುವ ಆಸೆ ಇದೆ. ನಾನು ಬಹಳಷ್ಟು ಓಡಾಡುತ್ತೇನೆ. ಕ್ಯಾಪ್, ಮಾಸ್ಕ್ ಧರಿಸಿ ಜನರಿಗೆ ತಿಳಿಯದಂತೆ ಸುತ್ತುತ್ತಿರುತ್ತೇನೆ. ಒಂದು ಕಥೆಯ ಸುಳಿವು ಸಿಕ್ಕಿದಾಕ್ಷಣ ಅದರೊಳಗೆ ಇಳಿದುಬಿಡುತ್ತೇನೆ. ಅಲ್ಲಿ ಏನು ನಡೆಯುತ್ತಿದೆ, ಯಾಕಾಯಿತು ಎನ್ನುವ ಪ್ರಶ್ನೆಗಳೇ ನನ್ನನ್ನು ಅತ್ತ ಕರೆದೊಯ್ಯುತ್ತವೆ’ ಎನ್ನುತ್ತಾ ತಮ್ಮ ತಯಾರಿ ಬಗ್ಗೆ ವಿವರಿಸಿದರು.

‘ಮುಂದಿನ ಸಿನಿಮಾ ಯಾವುದು?’ ಎಂಬ ಪ್ರಶ್ನೆಗೆ, ‘ನನ್ನ ಜೊತೆಯೇ ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ವೀರ ಎಂಬುವವರು ಒಂದು ಕಥೆ ಮಾಡುತ್ತಿದ್ದಾರೆ. ಇದರ ಪೂರ್ವತಯಾರಿ ಆರಂಭವಾಗಿದೆ. ‘ಸಿಟಿ ಲೈಟ್ಸ್’ ಬಿಡುಗಡೆಯಾದ ಬೆನ್ನಲ್ಲೇ ಇದನ್ನು ಕೈಗೆತ್ತಿಕೊಳ್ಳಲಿದ್ದೇನೆ’ ಎನ್ನುತ್ತಾ ಮಾತಿಗೆ ವಿರಾಮ ಹಾಕಿದರು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-455981271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.