ಕಳೆದ ಜ.23ರಂದು ತೆರೆಕಂಡ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಶೀಘ್ರದಲ್ಲೇ ಜೀ5ನಲ್ಲಿ ಸ್ಟ್ರೀಮ್ ಆಗಲಿದೆ.

ಜಡೇಶ್ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಹಾಗೂ ‘ಚೋಮನ ದುಡಿ’ ಕೃತಿಗಳ ಸ್ಫೂರ್ತಿಯಿಂದ ಈ ಸಿನಿಮಾ ಕಥೆ ಹೆಣೆದಿದ್ದು, ಮಾಡಿದ ಕೂಲಿಗೆ ಕಾಸು, ಅಸಮಾನತೆ, ದಬ್ಬಾಳಿಕೆ, ಕ್ರಾಂತಿ–ಹೋರಾಟದ ಕಥೆ ಹೊಂದಿದೆ. ಇದು ವಿಜಯ್ ಅವರ 29ನೇ ಸಿನಿಮಾವಾಗಿದ್ದು, ಖಳನಾಯಕನಾಗಿ ರಾಜ್ ಬಿ.ಶೆಟ್ಟಿ ಬಣ್ಣಹಚ್ಚಿದ್ದಾರೆ.

ಹಳ್ಳಿ ಹಿನ್ನೆಲೆಯ ಈ ಕಥೆ 80–90ರ ದಶಕದಲ್ಲಿ ಚಿತ್ರೀಕರಣಗೊಂಡಿದ್ದು, ಸಂಭಾಷಣೆಗಳು ಕೋಲಾರ ಭಾಗದ ಕನ್ನಡದಲ್ಲಿವೆ. ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದು, ಉಮಾಶ್ರೀ, ರಿತನ್ಯಾ, ಶಿಶಿರ್ ಬೈಕಾಡಿ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ಈ ಸಿನಿಮಾ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.