ಮಂಗಳವಾರ, ನವೆಂಬರ್ 24, 2020
19 °C

‘ಯುದ್ಧ’ ಗೆದ್ದ ಖುಷಿಯಲ್ಲಿ ದತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸಂಜಯ್‌ ದತ್‌ ಸ್ವಲ್ಪ ನಿರಾಳವಾಗಿದ್ದಾರೆ. ದೀರ್ಘಕಾಲದಿಂದ ಕಾಡುತ್ತಿದ್ದ ಕ್ಯಾನ್ಸರ್‌ನಿಂದ ಹೊರಬಂದಿದ್ದಾರೆ.

‘ಈ ಯುದ್ಧದಿಂದ ಜಯಗಳಿಸಿ ಬಂದಿರುವುದಕ್ಕೆ ಬಹಳ ಸಂತೋಷವೆನಿಸುತ್ತಿದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮಕ್ಕಳ ಹುಟ್ಟುಹಬ್ಬದ ದಿನದಂದೇ ಈ ಕಾಯಿಲೆಯಿಂದ ಮುಕ್ತವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ‘ಆರೋಗ್ಯ ಮತ್ತು ಕುಟುಂಬಕ್ಕೆ ಒಳ್ಳೆಯದಾಗುವಂತಹ ಉಡುಗೊರೆ ನೀಡುತ್ತಿರುವುದಕ್ಕೆ ಖುಷಿಯೆನಿಸಿದೆ’ ಎಂದು ಹೇಳಿದ್ದಾರೆ.

‘ಕಳೆದ ಕೆಲವು ವಾರಗಳು ನನ್ನ ಹಾಗೂ ನನ್ನ ಕುಟುಂಬದ ಪಾಲಿಗೆ ಅತ್ಯಂತ ಕಷ್ಟಕರವಾಗಿದ್ದವು. ದೇವರು ತನ್ನ ಪ್ರಬಲವಾದ ಸೈನಿಕರಿಗೆ ಕಠಿಣವಾದ ಯುದ್ದ ಸಂದರ್ಭಗಳನ್ನು ಒದಗಿಸುತ್ತಾನೆ’ ಎಂದಿದ್ದಾರೆ. 

ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿರುವ ದತ್‌,  ‘ಕಠಿಣ ಸಮಯದಲ್ಲಿ ಅಚಲವಾದ ವಿಶ್ವಾಸ ಮತ್ತು ಬೆಂಬಲ ನೀಡಿದ ಎಲ್ಲರೂ ನನ್ನ ಶಕ್ತಿಯ ಮೂಲಗಳು’ ಎಂದು ಅವರು ಬಣ್ಣಿಸಿದ್ದಾರೆ. ತಮಗೆ ಚಿಕಿತ್ಸೆ ನೀಡಿದ ಕೋಕಿಲಾಬೆನ್‌ ಆಸ್ಪತ್ರೆಯ ವೈದ್ಯರಾದ ಡಾ.ಸೇವಂತಿ ಮತ್ತು ಅವರ ತಂಡಕ್ಕೆ ದತ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಆಗಸ್ಟ್‌ನಲ್ಲಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಅವರು ಕೆಲಕಾಲ ಚಿತ್ರ ಸಂಬಂಧಿ ಕೆಲಸದಿಂದ ದೂರ ಉಳಿದಿದ್ದರು. ಈಗ ಕೆಜಿಎಫ್‌ ಚಾಪ್ಟರ್‌-2ನಲ್ಲಿ ‘ಅಧೀರ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು