ಬಹುತೇಕ ಹೊಸ ಕಲಾವಿದರಿಂದಲೇ ಕೂಡಿರುವ ‘ಎಜ್ಯುಕೇಟೆಡ್ ಬುಲ್ಸ್’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಚಿತ್ರಕ್ಕೆ ಜಿ.ಕೆ.ಮುದ್ದುರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವೆ. ಅಂಬರೀಷ್, ದೇವರಾಜ್, ಜಗ್ಗೇಶ್, ಶಶಿಕುಮಾರ್ ಮುಂತಾದ ನಾಯಕರಿಗೆ ಚಿತ್ರ ನಿರ್ದೇಶಿಸಿದ್ದೆ. ಇದು ನನ್ನ 41ನೇ ಚಿತ್ರ. ಸಂಪೂರ್ಣ ಹೊಸ ಕಲಾವಿದರನ್ನು ಹಾಕಿಕೊಂಡು ಈ ಚಿತ್ರ ಮಾಡಿರುವೆ. ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವೆ. ಎಲ್ಲಾ ಕಲಾವಿದರು ಹೊಸಬರು ಎನಿಸದಂತೆ ನಟಿಸಿದ್ದಾರೆ. ನಾಲ್ಕು ಜನ ವಿದ್ಯಾವಂತರಿಗೆ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕೆಂಬ ಹಂಬಲ. ಇವರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ. ಆಗ ಅವರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದೇ ಕಥೆ. ವಿದ್ಯೆಯ ಜತೆ ಬುದ್ಧಿ ಸ್ವಲ್ಪ ಜಾಸ್ತಿಯೇ ಇರಬೇಕು ಎಂಬ ಪರಿಕಲ್ಪನೆಯಲ್ಲಿ ಮಾಡಿದ ಚಿತ್ರವಿದು. ಸೆನ್ಸಾರ್ ಮುಗಿದಿದೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದರು ನಿರ್ದೇಶಕ.

ನೀರಜ್ಗೆ ಪೂರ್ವಿಕಾ ಜೋಡಿಯಾಗಿದ್ದಾರೆ. ಅಜಯ್ ಕುಮಾರ್, ತೇಜಸ್ ಕುಮಾರ್, ರಾಕೇಶ್, ಚಿದಾನಂದ್, ಭವ್ಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನವಿದೆ.

‘ಈವರೆಗೆ 15 ಚಿತ್ರಗಳಿಗೆ ಸಂಗೀತ ನೀಡಿರುವೆ. ಈ ಚಿತ್ರದಲ್ಲಿ ಎರಡು ಹಾಡುಗಳಿವೆ. ಸಂದೇಶದ ಜತೆಗೆ ಮನರಂಜನೆ ಇರುವ ಚಿತ್ರವಿದು. ಹಿನ್ನೆಲೆ ಸಂಗೀತವನ್ನೂ ನೀಡಿರುವೆ’ ಎಂದರು ಸಂಗೀತ ನಿರ್ದೇಶಕ.

ರತಿಂದ್ ಗೌಡ ಛಾಯಾಚಿತ್ರಗ್ರಹಣ, ಸಂಜೀವರೆಡ್ಡಿ ಸಂಕಲನವಿದೆ. ಎಂ.ಪಿ.ಅರುಣ್ಕುಮಾರ್ ಕಥೆ, ಹರೀಶ್ ಸಂಭಾಷಣೆ, ರಾಮ್ ನಾರಾಯಣ್ ಸಾಹಿತ್ಯವಿರುವ ಚಿತ್ರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-593309401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.